ADVERTISEMENT

ಮನಮೋಹನ ಸಿಂಗ್ ಅಸ್ಥಿ ವಿಸರ್ಜನೆ ವೇಳೆ ಗೈರು: ಕಾಂಗ್ರೆಸ್ ಹೇಳಿದ್ದೇನು?

ಪಿಟಿಐ
Published 30 ಡಿಸೆಂಬರ್ 2024, 9:42 IST
Last Updated 30 ಡಿಸೆಂಬರ್ 2024, 9:42 IST
ಮನಮೋಹನ ಸಿಂಗ್
ಮನಮೋಹನ ಸಿಂಗ್   

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಕುಟುಂಬದ ಖಾಸಗೀತನವನ್ನು ಗೌರವಿಸುವ ಸಲುವಾಗಿ, ಸಿಂಗ್ ಅವರ ಚಿತಾಭಸ್ಮ ವಿಸರ್ಜನೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು  ಭಾಗಿಯಾಗಿರಲಿಲ್ಲ ಎಂದು ಪಕ್ಷವು ಸೋಮವಾರ ತಿಳಿಸಿದೆ.

ಕಾಂಗ್ರೆಸ್‌ ವಿರುದ್ಧ ಅದರಲ್ಲೂ ಮುಖ್ಯವಾಗಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯು ಟೀಕೆ ಮಾಡಿದ ಬೆನ್ನಲ್ಲೇ ಈ ಸ್ಪಷ್ಟನೆ ನೀಡಿದೆ.

‘ಸಿಂಗ್ ಅವರ ಅಂತ್ಯಕ್ರಿಯೆಯ ಬಳಿಕ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೃತರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದರು’ ಎಂದು ಪಕ್ಷದ ನಾಯಕ ಪವನ್ ಖೇರಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಅಂತ್ಯಸಂಸ್ಕಾರದ ಸಮಯದಲ್ಲಿ ಕುಟುಂಬಕ್ಕೆ ಗೋಪ್ಯತೆ ಸಿಗದ ಕಾರಣ ಮತ್ತು ಕುಟುಂಬದ ಕೆಲವು ಸದಸ್ಯರು ಚಿತಾಗಾರವನ್ನು ತಲುಪಲು ಸಾಧ್ಯವಾಗದ ಕಾರಣ ಅಸ್ಥಿ ವಿಸರ್ಜನೆ ಸಂದರ್ಭದಲ್ಲಾದರೂ ಕುಟುಂಬದ ಖಾಸಗೀತನವನ್ನು ಕಾಪಾಡಬೇಕೆಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.