ರಂಜೀತ್ ರಂಜನ್
ನವದೆಹಲಿ: ‘ನನಗೆ ಅನುಮತಿ ನೀಡಿದರೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಜಾಲವನ್ನು ಕೇವಲ 24 ಗಂಟೆಗಳಲ್ಲಿಯೇ ಮುಗಿಸಿಬಿಡುತ್ತೇನೆ’ ಎಂದಿದ್ದ ಸಂಸದ ಪಪ್ಪು ಯಾದವ್ ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಪಪ್ಪು ಯಾದವ್ ಅವರ ಪತ್ನಿ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ಬುಧವಾರ ಹೇಳಿದರು.
‘ಪಪ್ಪು ಅವರಿಗೆ ಹಾಗೂ ನನಗೆ ಬೇರೆಯದೇ ರಾಜಕೀಯ ಜೀವನವಿದೆ. ನಾವು ಸುಮಾರು ಎರಡು ವರ್ಷಗಳಿಂದ ಜೊತೆಯಲ್ಲಿ ಕೂಡ ಇಲ್ಲ. ಆದ್ದರಿಂದ ಅವರು ಏನೇ ಹೇಳಿಕೆ ನೀಡಿದರೂ ನನಗೂ, ನನ್ನ ಮಕ್ಕಳಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು. ಪಪ್ಪು ಯಾದವ್ ಅವರ ಹೇಳಿಕೆ ಕುರಿತು ಪ್ರಕ್ರಿಯಿಸುವಂತೆ ರಂಜೀತ್ ಅವರನ್ನು ಕೇಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.