ADVERTISEMENT

2025ರ ಅತ್ಯಂತ ಪ್ರಕಾಶಮಾನ ಸೂಪರ್‌ಮೂನ್‌ ಗೋಚರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 16:04 IST
Last Updated 5 ನವೆಂಬರ್ 2025, 16:04 IST
<div class="paragraphs"><p>ಈ ವರ್ಷದ ಅತಿ ಪ್ರಕಾಶಮಾನವಾದ, ಅತಿ ದೊಡ್ಡ ಹಾಗೂ ಭೂಮಿಗೆ ಸಮೀಪ ಬಂದ ಚಂದಿರನನ್ನು ಆಕಾಶ ವೀಕ್ಷಕರು ಬುಧವಾರ ಮಂಗಳೂರಿನಲ್ಲಿ ಸಾಕ್ಷೀಕರಿಸಿದರು. </p></div>

ಈ ವರ್ಷದ ಅತಿ ಪ್ರಕಾಶಮಾನವಾದ, ಅತಿ ದೊಡ್ಡ ಹಾಗೂ ಭೂಮಿಗೆ ಸಮೀಪ ಬಂದ ಚಂದಿರನನ್ನು ಆಕಾಶ ವೀಕ್ಷಕರು ಬುಧವಾರ ಮಂಗಳೂರಿನಲ್ಲಿ ಸಾಕ್ಷೀಕರಿಸಿದರು.

   

ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಬೆಂಗಳೂರು: ಪ್ರಸಕ್ತ ವರ್ಷದ ಅತಿದೊಡ್ಡ ಹಾಗೂ ಅತ್ಯಂತ ಪ್ರಕಾಶಮಾನವಾದ ಚಂದ್ರ (ಸೂಪರ್‌ ಮೂನ್‌) ಬುಧವಾರ ಗೋಚರಿಸಿದೆ.  ‘ನವೆಂಬರ್‌ ಸೂಪರ್‌ ಮೂನ್‌’ ಎಂದು ಕರೆಯಲಾಗುವ ಈ ಚಂದ್ರ, ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತಲೂ ಭೂಮಿಗೆ ಬರೋಬ್ಬರಿ 17,000 ಮೈಲಿಗಳಷ್ಟು ಸಮೀಪದಲ್ಲಿದ್ದದ್ದು ವಿಶೇಷ.

ADVERTISEMENT

2025ನೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಮೂರು ಸೂಪರ್‌ ಮೂನ್‌ಗಳ ಪೈಕಿ ಇದು ಎರಡನೆಯದ್ದಾಗಿದ್ದು, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಈ ಸೂಪರ್‌ ಮೂನ್‌ ಶೇಕಡ 14ರಷ್ಟು ದೊಡ್ಡದಾಗಿ ಹಾಗೂ ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ. 

ಭೂಮಿಯಿಂದ 3,57,000 ಕಿ.ಮೀ.ದೂರದಲ್ಲಿ ಅಂದರೆ ಅತ್ಯಂತ ಸಮೀಪದಲ್ಲಿ ಚಂದ್ರ ಗೋಚರಿಸಿರುವ ಕಾರಣ, ಇದು ಅತ್ಯಂತ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಂಜೆ 6.49ರ ಸುಮಾರಿಗೆ ದೇಶದ ವಿವಿಧ ಭಾಗಗಳಲ್ಲಿ ಜನರು ಸೂಪರ್‌ ಮೂನ್‌ ವೀಕ್ಷಿಸಲು ಸಾಧ್ಯವಾಗಿದ್ದು, ಹಲವರು ‘ಅತ್ಯಂತ ಪ್ರಕಾಶಮಾನವಾದ ಸೂಪರ್‌ ಮೂನ್‌’ ಎಂಬ ಶೀರ್ಷಿಕೆಗಳೊಂದಿಗೆ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

2025ರ 3ನೇ ಹಾಗೂ ಅಂತಿಮ ಸೂಪರ್‌ ಮೂನ್‌ ಡಿಸೆಂಬರ್‌ 4ರಂದು ಕಾಣಿಸಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.