ADVERTISEMENT

ಶಬರಿಮಲೆ ದೇವಸ್ಥಾನಕ್ಕೆ ಗೂಗಲ್ ಪೇ ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ

ಪಿಟಿಐ
Published 1 ಡಿಸೆಂಬರ್ 2021, 11:46 IST
Last Updated 1 ಡಿಸೆಂಬರ್ 2021, 11:46 IST
ಶಬರಿಮಲೆ ಅಯ್ಯಪ್ಪ ದೇಗುಲ
ಶಬರಿಮಲೆ ಅಯ್ಯಪ್ಪ ದೇಗುಲ   

ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿತಿರುವಾಂಕೂರು ದೇವಸ್ವಂ ಮಂಡಳಿಯು ‘ಗೂಗಲ್ ಪೇ‘ ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಹಿಂದಿನ ವರ್ಷಗಳಂತೆ ಈ ವರ್ಷವೂ ಟಿಡಿಬಿ ತನ್ನ ಅಧಿಕೃತ ಧನಲಕ್ಷ್ಮಿ ಬ್ಯಾಂಕ್‌ನ ಸಹಯೋಗದಲ್ಲಿ ಡಿಜಿಟಲ್ ಪಾವತಿಯ ಈ ವ್ಯವಸ್ಥೆ ಮಾಡಿದೆ.ಇದಕ್ಕಾಗಿ ಸನ್ನಿಧಾನಂ, ದೇವಾಲಯದ ಸಂಕೀರ್ಣ ಮತ್ತು ನಿಲಕ್ಕಲ್‌ ತಪ್ಪಲಿನ ಹಲವು ಸ್ಥಳಗಳಲ್ಲಿ ಕ್ಯೂಆರ್‌ ಕೋಡ್‌ ಅನ್ನು ಪ್ರದರ್ಶಿಸಲಾಗಿದೆ.

ಇಲ್ಲಿಯವರೆಗೆ ವಿವಿಧೆಡೆ 22 ಕ್ಯೂಆರ್‌ ಕೋಡ್‌ಗಳನ್ನು ಅಳವಡಿಸಲಾಗಿದೆ.ಶಬರಿಮಲೆ ಯಾತ್ರೆಯ ಮಾರ್ಗದ ವಿವಿಧ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಕ್ಯೂಆರ್‌ ಕೋಡ್‌ಗಳನ್ನು ಪ್ರದರ್ಶಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಡಿಬಿ ಕಾರ್ಯನಿರ್ವಾಹಕ ಅಧಿಕಾರಿ ವಿ. ಕೃಷ್ಣಕುಮಾರ್ ವಾರಿಯರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.