ADVERTISEMENT

ಕಸ್ತೂರಿರಂಗನ್‌ ವರದಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 20:32 IST
Last Updated 31 ಆಗಸ್ಟ್ 2018, 20:32 IST

ಕೊಚ್ಚಿ : ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್‌ ಸಮಿತಿ ನೀಡಿರುವ ವರದಿಗೆ ಪರಿಸರ ತಜ್ಞ ಮಾಧವ್‌ ಗಾಡ್ಗಿಳ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈ ವರದಿಯು ಅಸಾಂವಿಧಾನಿಕ ಹೇಳಿಕೆಗಳನ್ನು ಒಳಗೊಂಡಿದೆ. ವರದಿ ಸಿದ್ಧಪಡಿಸುವ ಮುನ್ನ ಸೌಜನ್ಯಕ್ಕೂ ಸಹ ಪಶ್ಚಿಮ ಘಟ್ಟ ಜೈವಿಕ ತಜ್ಞರ ಸಮಿತಿಯು(ಡಬ್ಲ್ಯೂಜಿಇಇಪಿ) ಯಾವ ರೀತಿ ಕಾರ್ಯನಿರ್ವಹಿಸಿತು ಎನ್ನುವ ಬಗ್ಗೆ ಕಸ್ತೂರಿರಂಗನ್‌ ಸಮಿತಿ ನನ್ನನ್ನು ಕೇಳಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

’ಒಬ್ಬ ವಿಜ್ಞಾನಿಯಾಗಿ ಸಂಪೂರ್ಣ ಪಾರದರ್ಶಕ ಮತ್ತು ಮುಕ್ತವಾದ ವರದಿ ನೀಡಿದ್ದೆ’ ಎಂದು ಅವರು ಸಮರ್ಥಿಸಿಕೊಂಡರು.

ADVERTISEMENT

‘ಡಾ. ಕಸ್ತೂರಿರಂಗನ್‌ ನನ್ನ ಹಳೆಯ ಸ್ನೇಹಿತ. ಕಳೆದ 30 ವರ್ಷಗಳಿಂದ ನನ್ನನ್ನು ಬಲ್ಲರು.‍ಆದರೆ, ಅವರು ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಅಧ್ಯಯನ ಆರಂಭಿಸಿದಾಗ ನನ್ನಿಂದ ಮಾಹಿತಿ ಪಡೆಯಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಡಬ್ಲ್ಯೂಜಿಇಇಪಿಗಿಂತಲೂ ಉತ್ತಮವಾದ ಮಾಹಿತಿ ಲಭಿಸಿದೆ ಎಂದು ಹೇಳಿದ್ದರು. ಈ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ತಿಳಿಸಿದೆ.ಆದರೆ, ಎಂದಿಗೂ ಅದನ್ನು ಬಹಿರಂಗಪಡಿಸಲಿಲ್ಲ. ಇದು ವೈಜ್ಞಾನಿಕ ಉಲ್ಲಂಘನೆ’ ಎಂದು ಹೇಳಿದರು.

‘ಕಸ್ತೂರಿರಂಗನ್‌ ಸಮಿತಿಯು ಪಶ್ಚಿಮ ಘಟ್ಟದಲ್ಲಿನ ಜಲಸಂಪನ್ಮೂಲದ ಬಗ್ಗೆ ಗಮನಹರಿಸಲಿಲ್ಲ. ಸರ್ಕಾರಿ ನಿಯಂತ್ರಣದಲ್ಲಿರುವ ಅರಣ್ಯಗಳು ಮತ್ತು ಸಂರಕ್ಷಣೆಯ ಬಗ್ಗೆ ಈ ವರದಿಯಲ್ಲಿ ಹೆಚ್ಚು ಪ್ರಸ್ತಾಪಿಸಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.