ADVERTISEMENT

ಒಡಿಶಾ: ನಕಲಿ ಖಾತೆಯಲ್ಲಿ ನ್ಯಾಯಾಂಗ ವ್ಯವಸ್ಥೆ ನಿಂದಿಸಿದ ವಕೀಲನ ಅಮಾನತು

ಪಿಟಿಐ
Published 16 ಸೆಪ್ಟೆಂಬರ್ 2025, 5:28 IST
Last Updated 16 ಸೆಪ್ಟೆಂಬರ್ 2025, 5:28 IST
   

ಕಟಕ್‌: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯ ಮೂಲಕ ನ್ಯಾಯಾಂಗ ವ್ಯವಸ್ಥೆ ನಿಂದಿಸಿದ ಆರೋಪದ ಮೇಲೆ ವಕೀಲರೊಬ್ಬರನ್ನು ಒಡಿಶಾ ರಾಜ್ಯ ಬಾರ್‌ ಕೌನ್ಸಿಲ್‌ನಿಂದ ಎರಡು ವರ್ಷ ಅಮಾನತುಗೊಳಿಸಲಾಗಿದೆ.

ವಕೀಲ ಹೇಮಂತ್‌ ಕುಮಾರ್‌ ನಾಯಕ್‌ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಯ ಮೂಲಕ ನ್ಯಾಯಾಂಗ ವ್ಯವಸ್ಥೆ ಹಾಗೂ ಅಧಿಕಾರಿಗಳ ವಿರುದ್ಧ ಪೋಸ್ಟ್‌ ಮಾಡಿದ್ದರು. ಶಿಸ್ತು ಸಮಿತಿಯ ಎದುರು ಆರೋಪ ಸಾಬೀತಾಗಿದೆ.

ಹೇಮಂತ್‌ ಕುಮಾರ್‌ ನಾಯಕ್‌ ಎನ್ನುವವರು 1998ರಿಂದ ಬಾರ್‌ ಕೌನ್ಸಿಲ್‌ ಸದಸ್ಯರಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯ ಮೂಲಕ ನ್ಯಾಯಾಂಗ ವ್ಯವಸ್ಥೆ, ಬಾರ್‌ ಕೌನ್ಸಿಲ್‌ ಹಾಗೂ ಅಧಿಕಾರಿಗಳ ವಿರುದ್ಧ ಮಾನಹಾನಿಕರ ಪೋಸ್ಟ್‌ಗಳನ್ನು ಮಾಡಿದ್ದರು. ಇದಕ್ಕೆ ಸಂಬಂಧಿಸಿದ ನೋಟಿಸ್‌ಗಳಿಗೆ ಕೂಡ ಸಮರ್ಪಕ ಉತ್ತರ ನೀಡಿಲ್ಲ. ಬಾರ್‌ ಕೌನ್ಸಿಲ್‌ನ ಅಧಿಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ ಎಂದು ಬಾರ್‌ ಕೌನ್ಸಿಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗೆ ವಕೀಲ ಹೇಮಂತ್‌ ಕುಮಾರ್‌ ಅವರು ಲಭ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.