ADVERTISEMENT

ರಥಯಾತ್ರೆ ಕಾಲ್ತುಳಿತ: ತನಿಖೆಗೆ 4 ಸದಸ್ಯರ ತಂಡ ರಚನೆ 

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 16:00 IST
Last Updated 2 ಜುಲೈ 2025, 16:00 IST
<div class="paragraphs"><p>ಪುರಿಯಲ್ಲಿ ರಥಯಾತ್ರೆ ಸಂಭ್ರಮ</p></div>

ಪುರಿಯಲ್ಲಿ ರಥಯಾತ್ರೆ ಸಂಭ್ರಮ

   

(ಪಿಟಿಐ ಚಿತ್ರ)

ಭುವನೇಶ್ವರ (ಪಿಟಿಐ): ಪುರಿಯಲ್ಲಿ ರಥಯಾತ್ರೆ ವೇಳೆ ನಡೆದ ಕಾಲ್ತುಳಿತ ಪ್ರಕರಣದ ವಿಚಾರಣೆಯನ್ನು 30 ದಿನಗಳ ಒಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾಲ್ಕು ಸದಸ್ಯರ ತಂಡವೊಂದನ್ನು ಒಡಿಶಾ ಸರ್ಕಾರ ಬುಧವಾರ ರಚಿಸಿದೆ.

ADVERTISEMENT

ಅಭಿವೃದ್ಧಿ ಆಯುಕ್ತರಾದ ಅನು ಗರ್ಗ್‌ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ತಂಡವು ಅವರಿಗೆ ವಿಚಾರಣೆ ತ್ವರಿತಗೊಳಿಸಲು ಸಹಾಯ ಮಾಡಲಿದೆ. ಒಡಿಶಾ ಆಡಳಿತ ಸೇವಾ (ಒಎಎಸ್‌) ಅಧಿಕಾರಿಗಳಾದ ಮಾನಸ್‌ ರಂಜನ್‌ ಸಾಮಲ್‌, ವಿನಯ ಕುಮಾರ್‌ ದಾಶ್‌, ರಶ್ಮೀ ರಂಜನ್‌ ನಾಯಕ್‌ ಹಾಗೂ ಪ್ರದೀಪ್‌ ಕುಮಾರ್‌ ಸಾಹು ಅವರು ತಂಡದಲ್ಲಿದ್ದಾರೆ. 

ಜೂನ್‌ 29ರಂದು ರಥಯಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ 3 ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯ‌ಗೊಂಡಿದ್ದರು. ಅನು ಅವರು ಸೋಮವಾರ ತನಿಖೆ ಆರಂಭಿಸಿದ್ದು, ಶೀಘ್ರವೇ ಕಾಲ್ತುಳಿತಕ್ಕೆ ಕಾರಣವಾದವರನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.