ರಸಗುಲ್ಲಾ
ಭುವನೇಶ್ವರ: ರಥಯಾತ್ರೆ ಬೆನ್ನಲ್ಲೇ ಪುರಿಯ ಜಗನ್ನಾಥ ದೇಗುಲದಲ್ಲಿ ಶುಕ್ರವಾರ ನೀಲಾದ್ರಿ ಬಿಜೆ (ದೇಗುಲ ಪ್ರವೇಶ) ನಡೆದರೆ, ಇತ್ತ ಒಡಿಶಾದಾದ್ಯಂತ ‘ರಸಗುಲ್ಲಾ ದಿವಸ’ ಆಚರಿಸಲಾಯಿತು.
ಪುರಾಣದ ಪ್ರಕಾರ, ರಥಯಾತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ಲಕ್ಷ್ಮಿ ದೇವಿಯು ಕೋಪಗೊಂಡಿರುತ್ತಾಳೆ. ಪತ್ನಿಯ ಕೋಪವನ್ನು ತಣ್ಣಗಾಗಿಸಲು ಜಗನ್ನಾಥ ‘ರಸಗುಲ್ಲಾ’ ನೀಡುತ್ತಾರೆ. ಆ ದಿನವನ್ನು ‘ರಸಗುಲ್ಲಾ ದಿನ’ ಆಗಿ ಆಚರಣೆ ಮಾಡಲಾಗುತ್ತದೆ.
2015 ಜುಲೈ 30ರಿಂದ ಒಡಿಶಾದ ಜನರು ‘ನೀಲಾದ್ರಿ ಬಿಜೆ’ ಆಚರಣೆಯನ್ನು ‘ರಸಗುಲ್ಲಾ ದಿವಸ’ವಾಗಿ ಆಚರಿಸುತ್ತಿದ್ದಾರೆ.
‘ಒಡಿಶಾ ರೂಪಾಂತರದ ರಸಗುಲ್ಲಾ’ಗೆ 2019ರಲ್ಲಿ ಭೌಗೋಳಿಕ ಮಾನ್ಯತೆ ದೊರೆತಿದೆ.
ಜಗನ್ನಾಥ ರಥಯಾತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.