
ಪಿಟಿಐ
ಹಳಿ ತಪ್ಪಿದ ರೈಲು
ಭುವನೇಶ್ವರ: ಗೂಡ್ಸ್ ರೈಲೊಂದರ ಮೂರು ಬೋಗಿಗಳು ಹಳಿ ತಪ್ಪಿರುವ ಘಟನೆ ಒಡಿಶಾದ ಬಾಲೇಶ್ವರದಲ್ಲಿ ಶುಕ್ರವಾರ ನಡೆದಿದೆ.
‘ರುಪ್ಸಾ ರೈಲು ನಿಲ್ದಾಣದಲ್ಲಿ ಸಿಮೆಂಟ್ ಮತ್ತು ರಸಗೊಬ್ಬರವನ್ನು ಇಳಿಸಿ ಹೊರಟಿದ್ದ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಯಾರಿಗೂ ಗಾಯಗಳಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಆಗ್ನೇಯ ರೈಲ್ವೆಯ ಖರಗಪುರ ವಿಭಾಗವು ತನಿಖೆ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.