ಆನೆ ‘ವತ್ಸಲಾ’
ಭೋಪಾಲ್: ಏಷ್ಯಾದ ಅತಿ ಹಿರಿಯ ಆನೆ ಎಂದೇ ಹೆಸರಾಗಿದ್ದ ‘ವತ್ಸಲಾ’ ಮಂಗಳವಾರ ನಿಧನವಾಗಿದೆ. ‘ವತ್ಸಲಾ’ ವಯಸ್ಸು 100 ವರ್ಷ ದಾಟಿತ್ತು ಎಂದು ವರದಿಯಾಗಿದೆ.
ಆನೆಯನ್ನು ಕೇರಳದ ನರ್ಮದಾಪುರಂನಿಂದ ಕರೆತಂದು ಬಳಿಕ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಬಿಡಲಾಗಿತ್ತು.
ಇತರ ಆನೆಗಳು ಮರಿಗಳಿಗೆ ಜನ್ಮ ನೀಡುವಾಗ ಅಜ್ಜಿಯಾಗಿರುತ್ತಿದ್ದ ‘ವತ್ಸಲಾ’, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಮಂಗಳವಾರ ಹಿನೌಟಾ ಪ್ರದೇಶದ ಖೈರಾಯನ್ ಚರಂಡಿ ಬಳಿ ಮುಂದಿನ ಕಾಲುಗಳಿಗೆ ಗಾಯವಾಗಿ ವತ್ಸಲಾ ಕುಳಿತುಕೊಂಡಿತ್ತು. ಇದನ್ನು ಕಂಡ ಅರಣ್ಯ ಅಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಆದರೂ ಮಧ್ಯಾಹ್ನದ ಹೊತ್ತಿಗೆ ಆನೆ ಮೃತಪಟ್ಟಿದೆ’ ಎಂದು ಅರಣ್ಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಯಸ್ಸಿನ ಕಾರಣದಿಂದ ‘ವತ್ಸಲಾ’ಗೆ ಹೆಚ್ಚು ದೂರ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಅದರ ಆರೋಗ್ಯದ ಮೇಲೆ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ನಿಗಾ ವಹಿಸಿದ್ದರು ಎಂದು ಹೇಳಲಾಗಿದೆ.
‘ವತ್ಸಲಾ’ ನಿಧನದ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ, ಡಾ. ಮೋಹನ್ ಯಾದವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಾಡುಗಳ ಮೌನ ರಕ್ಷಕ, ತಲೆಮಾರುಗಳ ಕೊಂಡಿಯಾಗಿದ್ದ ಮಧ್ಯಪ್ರದೇಶದ ಸಂವೇದನೆಗಳ ಸಂಕೇತವಾಗಿದ್ದ ಆನೆ ನಿಧನವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.