ADVERTISEMENT

ದೆಹಲಿ ವಿಧಾನಸಭಾ ಚುನಾವಣೆ: ಶತಾಯುಷಿಯಿಂದ ಮತದಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 15:43 IST
Last Updated 8 ಫೆಬ್ರುವರಿ 2020, 15:43 IST
ಕಾಳಿತಾರಾ ಮಂಡಲ್‌
ಕಾಳಿತಾರಾ ಮಂಡಲ್‌   

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶತಾಯುಷಿ ಮಹಿಳೆ ಕಾಳಿತಾರಾ ಮಂಡಲ್‌ (111) ಎಂಬುವರು ಶನಿವಾರ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಚಿತ್ತರಂಜನ್‌ ಪಾರ್ಕ್‌ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ದೆಹಲಿಯಲ್ಲಿ 132 ಶತಾಯುಷಿಗಳಿದ್ದು, ಇವರಲ್ಲಿ ಮಂಡಲ್‌ ಅವರೇ ಹಿರಿಯರು.ಇದುವರೆಗೂ ನಡೆದ ಎಲ್ಲ ಚುನಾವಣೆಗಳಲ್ಲೂ ಅವರು ಮತ ಚಲಾಯಿಸಿದ್ದಾರೆ. 1908ರಲ್ಲಿ ಈಗಿನ ಬಾಂಗ್ಲಾದೇಶದ (ಅವಿಭಜಿತ ಭಾರತ) ಬರಿಸಾಲ್‌ನಲ್ಲಿ ಜನಿಸಿದ ಅವರು, ಭಾರತ ವಿಭಜನೆಯ ನಂತರ ದೆಹಲಿಗೆ ವಲಸೆ ಬಂದಿದ್ದಾರೆ.

‘ಇದುವರೆಗೂ ಎಷ್ಟು ಚುನಾವಣೆಗಳಿಗೆ ಮತ ಚಲಾಯಿಸಿದ್ದೇನೆ ಎಂಬುದು ನೆನಪಿಲ್ಲ. ಜವಾಬ್ದಾರಿಯುತ ನಾಗರಿಕರಾದ ಎಲ್ಲರೂ ಮತ ಚಲಾಯಿಸಬೇಕು’ ಎಂದು ಪ್ರತಿಕ್ರಿಯಿದ್ದಾರೆ. ಮತ ಚಲಾಯಿಸಿದ ನಂತರ ‘ಶಾಹಿ’ ಗುರುತು ತೋರಿಸಿ ನಗೆ ಬೀರಿದ್ದಾರೆ.

ADVERTISEMENT

80 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮತಗಟ್ಟೆಗಳಿಗೆ ಕರೆತರಲುವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು ಎಂದು ಚುನಾವಣಾಧಿಕಾರಿ ಹರೀಶ್ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.