ADVERTISEMENT

ಕೋವಿಡ್ | ಓಮೈಕ್ರಾನ್‌ ಉಪತಳಿ ವಿರುದ್ಧ ಲಸಿಕೆ ಪರಿಣಾಮಕಾರಿ: ಆರೋಗ್ಯ ಸಚಿವ

ಪಿಟಿಐ
Published 12 ಜನವರಿ 2023, 3:12 IST
Last Updated 12 ಜನವರಿ 2023, 3:12 IST
ಮನ್ಸುಖ್ ಮಾಂಡವಿಯ
ಮನ್ಸುಖ್ ಮಾಂಡವಿಯ   

ನವದೆಹಲಿ: ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎಫ್.7 ಇದುವರೆಗೆ 200 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿಗಳಲ್ಲಿ ಪತ್ತೆಯಾಗಿದೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಮಾಹಿತಿ ನೀಡಿದ್ದಾರೆ.

ಓಮೈಕ್ರಾನ್ ಉಪತಳಿ ಬಿಎಫ್.7 ನಿಯಂತ್ರಿಸಲು ಕೋವಿಡ್ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಅವರು ತಿಳಿಸಿದರು.

ಈವರೆಗೆ 15ಕ್ಕೂ ಲಕ್ಷಕ್ಕೂ ಹೆಚ್ಚು ಅಂತತರಾಷ್ಟ್ರೀಯ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 200 ಮಂದಿಯ ಜಿನೋಮಿಕ್ ಸಿಕ್ವೆನ್ಸೀಸ್ ಪರೀಕ್ಷೆಯಲ್ಲಿ ಓಮೈಕ್ರಾನ್ ಉಪತಳಿ ಬಿಎಫ್.7 ದೃಢಪಟ್ಟಿವೆ ಎಂದು ಹೇಳಿದರು.

ADVERTISEMENT

ಓಮೈಕ್ರಾನ್ ಉಪತಳಿ ಪತ್ತೆಯಾದ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ಅಥವಾ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.