ADVERTISEMENT

ಭಾರತದಲ್ಲಿ ಇವಿಎಂ ಬಳಕೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

ಪಿಟಿಐ
Published 3 ನವೆಂಬರ್ 2020, 14:02 IST
Last Updated 3 ನವೆಂಬರ್ 2020, 14:02 IST
ಪಕ್ಷದ ಇತರೆ ಕಾರ್ಯಕರ್ತರೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್
ಪಕ್ಷದ ಇತರೆ ಕಾರ್ಯಕರ್ತರೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್   

ಭೋಪಾಲ್: ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆಯುತ್ತಿರುವ ಮತದಾನದ ಮಧ್ಯೆ, ಭಾರತದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ (ಇವಿಎಂ) ಬಳಕೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್, ಈ ಸಾಧನವು ಹ್ಯಾಕಿಂಗ್‌ಗೆ ಗುರಿಯಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿ, ಈ ಉಪಚುನಾವಣೆಗಳಲ್ಲಿ ಈಗಾಗಲೇ ಕಾಂಗ್ರೆಸ್ ತನಗೆ ಸೋಲುಂಟಾಗುವುದನ್ನು ಗ್ರಹಿಸಿದೆ. ಆದ್ದರಿಂದಲೇಅವರು ಇವಿಎಂಗಳಲ್ಲಿ ದೋಷಗಳನ್ನು ಹುಡುಕುತ್ತಿದ್ದಾರೆ. ಇದು ದಶಕಗಳಿಂದಲೂ ಭಾರತದಲ್ಲಿ ಚುನಾವಣೆಯ ಸಮಯದಲ್ಲಿ ಬಳಸಲ್ಪಡುತ್ತಿದೆ ಎಂದಿದ್ದಾರೆ.

ಇಂದಿನ ತಾಂತ್ರಿಕ ಯುಗದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೇ ಇವಿಎಂ ಅನ್ನು ನಂಬುವುದಿಲ್ಲ. ಆದರೆ ಭಾರತ ಮತ್ತು ಕೆಲವು ಸಣ್ಣ ದೇಶಗಳಲ್ಲಿ ಚುನಾವಣೆಗಳನ್ನು ಇವಿಎಂ‌ಗಳ ಮೂಲಕ ನಡೆಸುತ್ತವೆ. ಅಭಿವೃದ್ಧಿ ಹೊಂದಿದ ದೇಶಗಳು ಏಕೆ (ಇವಿಎಂ) ಬಳಸುವುದಿಲ್ಲ? ಏಕೆಂದರೆ ಅವರು ಇವಿಎಂಗಳನ್ನು ನಂಬುವುದಿಲ್ಲ. ಏಕೆಂದರೆ ಅದರಲ್ಲಿರುವ ಚಿಪ್ ಅನ್ನು ಹ್ಯಾಕ್ ಮಾಡಬಹುದು ಎಂದು ಈ ಸಾಧನಗಳನ್ನು ಬಳಸುವ ದೇಶಗಳ ಪಟ್ಟಿ ಮಾಡಿರುವ ಸುದ್ದಿಯನ್ನು ಉಲ್ಲೇಖಿಸಿ ಸಿಂಗ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಸಿಂಗ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಚೌಹಾಣ್, ಇವಿಎಂಗಳನ್ನು ದೂಷಿಸುವ ಮೂಲಕ ಉಪಚುನಾವಣೆಯಲ್ಲಿ ತನ್ನ ಸೋಲು ಸನ್ನಿಹಿತ ಎಂಬುದನ್ನು ಕಾಂಗ್ರೆಸ್ ಕಂಡುಕೊಂಡಿದೆ. ದಿಗ್ವಿಜಯ್ ಸಿಂಗ್ ಅವರು ಇವಿಎಂಗಳ ಬಗ್ಗೆ ಈಗ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದೇ ಇವಿಎಂಗಳು 2018ರಲ್ಲಿ ಮಧ್ಯಪ್ರದೇಶದಲ್ಲಿ 114 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಇದೇ ಇವಿಎಂಗಳು ಆ ಸಮಯದಲ್ಲಿ ಉತ್ತಮವಾಗಿದ್ದವು. ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ನಡೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಫಲಿತಾಂಶ ಬಂದಾಗಲೂ ಇದೇ ಇವಿಎಂಗಳನ್ನು ಅಲ್ಲಿ ಬಳಸಲಾಗಿತ್ತು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಉಪಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿಯಲ್ಲಿ ತೊಡಗಿದ್ದು, ಗೆಲ್ಲುವ ಹಟಕ್ಕೆ ಬಿದ್ದಿವೆ. 230 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯು ಅರ್ಧ ಸ್ಥಾನ (116) ತಲುಪಲು 28 ಸ್ಥಾನಗಳ ಪೈಕಿ ಕನಿಷ್ಠ ಒಂಬತ್ತು ಸ್ಥಾನಗಳನ್ನು ಗೆಲ್ಲಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.