ADVERTISEMENT

ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶ ಕಟ್ಟಲು ಅಥವಾ ಒಡೆಯಲು ಆಗದು: ಭಾಗವತ್

ಪಿಟಿಐ
Published 15 ಫೆಬ್ರುವರಿ 2023, 5:56 IST
Last Updated 15 ಫೆಬ್ರುವರಿ 2023, 5:56 IST
ಮೋಹನ್‌ ಭಾಗವತ್
ಮೋಹನ್‌ ಭಾಗವತ್   

ನಾಗ್ಪುರ: ಒಂದು ಸಿದ್ಧಾಂತ, ಒಬ್ಬ ವ್ಯಕ್ತಿಯಿಂದ ದೇಶವನ್ನು ಕಟ್ಟಲು ಅಥವಾ ಒಡೆಯಲು ಆಗದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ಹೇಳಿದರು.

ಇಲ್ಲಿನ ರಾಜರತ್ನ ಪುರಸ್ಕಾರ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಗತ್ತಿನ ಉತ್ತಮ ದೇಶಗಳು ವಿವಿಧ ಬಗೆಯ ವಿಚಾರಗಳು, ಬಹು ವ್ಯವಸ್ಥೆಗಳಿಂದಲೇ ನಿರ್ಮಿತವಾಗಿವೆ. ಇಂಥ ವಿವಿಧತೆಯಿಂದಲೇ ಅವು ಅಭಿವೃದ್ಧಿ ಹೊಂದುತ್ತಿವೆ’ ಎಂದು ಹೇಳಿದರು.

ನಾಗ್ಪುರದ ರಾಜ ಮನೆತನ ಭೋಂಸ್ಲೆ ಕುಟುಂಬ ಕುರಿತು ಪ್ರಸ್ತಾಪಿಸಿದ ಅವರು, ‘ಭೋಂಸ್ಲೆ ಕುಟುಂಬವು ಸಂಘದ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌ ಅವರ ಕಾಲದಿಂದಲೂ ಆರ್‌ಎಸ್‌ಎಸ್‌ ಜೊತೆ ಸಂಪರ್ಕ ಹೊಂದಿದೆ’ ಎಂದರು.

ADVERTISEMENT

‘ಛತ್ರಪತಿ ಶಿವಾಜಿ ಮಹಾರಾಜ್‌ ಅವರಿಂದಾಗಿ ದಕ್ಷಿಣ ಭಾರತವು ದೌರ್ಜನ್ಯದಿಂದ ಮುಕ್ತವಾಯಿತು. ನಾಗ್ಪುರದ ಭೋಂಸ್ಲೆ ಕುಟುಂಬವು ಉತ್ತರ ಹಾಗೂ ಪೂರ್ವ ಭಾರತವನ್ನು ದೌರ್ಜನ್ಯಗಳಿಂದ ಬಿಡುಗಡೆ ಮಾಡಿತು’ ಎಂದು ಭಾಗವತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.