ADVERTISEMENT

ಆನ್‌ಲೈನ್‌ ವಂಚನೆ: IPOನಲ್ಲಿ ಹೂಡಿಕೆ; ₹40 ಲಕ್ಷ ಕಳೆದುಕೊಂಡ ವ್ಯಕ್ತಿ

ಪಿಟಿಐ
Published 18 ಆಗಸ್ಟ್ 2025, 5:58 IST
Last Updated 18 ಆಗಸ್ಟ್ 2025, 5:58 IST
   

ಠಾಣೆ : ಆನ್‌ಲೈನ್‌ ವಹಿವಾಟಿನ ಸ್ಕೀಂ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ₹40.99 ಲಕ್ಷ ವಂಚಿಸಿದ ಪ್ರಕರಣ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿ‌ದ್ದಾರೆ. 

ಫೇಸ್‌ಬುಕ್‌ನಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಜಾಹೀರಾತೊಂದು ಕಾಣಿಸಿತು. ಆ ಪುಟವನ್ನು ಅನುಸರಣೆ ಮಾಡಿದೆ. ಅವರು ಒಂದು ವಾಟ್ಸಪ್ ಗುಂಪಿಗೆ ನನ್ನನ್ನು ಸೇರಿಸಿದರು. ನಂತರ ಐಪಿಒಗಳಲ್ಲಿ ಹೂಡಿಕೆ ಮಾಡಲು ಮಾರ್ಗದರ್ಶನ ಮಾಡಿದರು ಎಂದು ವಂಚನೆಗೆ ಒಳಗಾದ ವ್ಯಕ್ತಿಯು ದೂರಿನಲ್ಲಿ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 

ವಂಚಕರ ಮಾರ್ಗದರ್ಶನದಂತೆ ವ್ಯಕ್ತಿಯು ಮೇ ಹಾಗೂ ಜೂನ್‌ ತಿಂಗಳಿನಲ್ಲಿ ₹40.99,814 ದಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ. ಕೆಲ ದಿನಗಳ ನಂತರ ಆತನ ಖಾತೆಯಲ್ಲಿ ಹೂಡಿಕೆ ಮಾಡಿದ್ದ ಹಣವು ₹88,39,072 ಕ್ಕೆ ಹೆಚ್ಚಾಗಿರುವಂತೆ ತೋರಿಸಿದೆ. ಆದರೆ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂದು ದೂರುದಾರ ಪೊಲೀಸರಿಗೆ ಹೇಳಿದ್ದಾನೆ.

ADVERTISEMENT

ವ್ಯಕ್ತಿಯು ಹಣವನ್ನು ಹಿಂಪಡೆಯಲು ಕೇಳಿದಾಗ ವಂಚಕರು ತೆರಿಗೆಯ ರೂಪದಲ್ಲಿ ಹೂಡಿಕೆ ಮಾಡಿರುವ ಒಟ್ಟು ಹಣದಲ್ಲಿ ಶೇ 20 ರಷ್ಟು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ವರ್ತಕ ನಗರದ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. 

ವ್ಯಕ್ತಿ ನೀಡಿದ ದೂರಿನಡಿ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ವಂಚನೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.