ADVERTISEMENT

ಮಸಣಕ್ಕೆ 20 ಜನ, ಆದ್ರೆ ಹೆಂಡದಂಗಡಿ ಮುಂದೆ ಸಾವಿರ ಮಂದಿ: ಸಂಜಯ್ ರಾವುತ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 9 ಮೇ 2020, 6:41 IST
Last Updated 9 ಮೇ 2020, 6:41 IST
ಶಿವಸೇನೆ ಸಂಸದ ಸಂಜಯ್ ರಾವುತ್
ಶಿವಸೇನೆ ಸಂಸದ ಸಂಜಯ್ ರಾವುತ್   

ಮುಂಬೈ: ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಸರ್ಕಾರ ಸಡಿಲಗೊಳಿಸಿರುವ ಬೆನ್ನಲ್ಲೇ ಅಂತ್ಯಕ್ರಿಯೆಯಲ್ಲಿ 20 ಜನ ಮಾತ್ರ ಭಾಗವಹಿಸಬೇಕು ಆದ್ರೆಹೆಂಡದಂಗಡಿ ಮುಂದೆ ಸಾವಿರ ಮಂದಿಗೆ ಅವಕಾಶ ಎಂದು ಶಿವಸೇನಾ ನಾಯಕಸಂಜಯ್ ರಾವುತ್ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ

ಅಂತ್ಯಕ್ರಿಯೆಗಾಗಿ ಸೇರಲು ಕೇವಲ 20 ಜನರಿಗೆ ಮಾತ್ರ ಅವಕಾಶವಿದೆ. ಏಕೆಂದರೆ ಸ್ಮಶಾನದಲ್ಲಿ ಸ್ಪಿರಿಟ್ (ಆತ್ಮ) ಹೋಗುತ್ತದೆ.ಮದ್ಯದ ಅಂಗಡಿಯ ಮುಂದೆ ಸಾವಿರ ಜನಸೇರಬಹುದು ಯಾಕೆಂದರೆ ಅಲ್ಲಿಸ್ಪಿರಿಟ್ (ಚೈತನ್ಯ) ಸಿಗುತ್ತದೆಎಂದು ಮೊನಚು ಹಾಸ್ಯದ ಮೂಲಕ ಟ್ವೀಟ್ಮಾಡಿದ್ದಾರೆ.

Only 20 people allowed to gather for a funeral -
because the spirit has already left the body.

1000's allowed to gather near an alcohol shop,
because the shops have spirits in them.

ADVERTISEMENT

ಮೇ 5 ರಂದು ಗೃಹ ಸಚಿವಾಲಯದ (ಎಂಎಚ್‌ಎ) ಜಂಟಿ ಕಾರ್ಯದರ್ಶಿ ಪುಣ್ಯಾ ಸಲೀಲಾ ಶ್ರೀವಾಸ್ತವ ಮಾತನಾಡಿ, "ಅಂತರವನ್ನು ಕಾಪಾಡಿಕೊಳ್ಳಲು, ವಿವಾಹ ಸಮಾರಂಭಗಳಲ್ಲಿ ಕೇವಲ 50 ಜನರು ಮಾತ್ರ ಒಂದೆಡೆ ಸೇರಬಹುದು ಮತ್ತು ಅಂತಿಮ ಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.