ಪಿಟಿಐ ಚಿತ್ರ
ನವದೆಹಲಿ: ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರರ ಚಟುವಟಿಕೆ ಕುರಿತು ದೇಶದ ನಿಲುವನ್ನು ಮನವರಿಕೆ ಮಾಡಿಕೊಡಲು ಜನತಾದಳ (ಯು) ಸಂಸದ ಸಂಜಯ್ ಝಾ ನೇತೃತ್ವದ ಸರ್ವಪಕ್ಷಗಳ ನಿಯೋಗವು ಬುಧವಾರ ಜಪಾನ್‌ಗೆ ತೆರಳಿತು.
ಈ ನಿಯೋಗವು ದಕ್ಷಿಣ ಕೊರಿಯಾ, ಮಲೇಷ್ಯಾ, ಇಂಡೊನೇಷ್ಯಾ, ಸಿಂಗಪುರಕ್ಕೆ ಭೇಟಿ ನೀಡಲಿದೆ. ಆಪರೇಷನ್ ಸಿಂಧೂರ ಮತ್ತು ಆನಂತರ ಭಾರತ–ಪಾಕಿಸ್ತಾನ ನಡುವೆ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಭಾರತದ ನಿಲುವನ್ನು ತಿಳಿಸುವುದು ನಿಯೋಗದ ಭೇಟಿಯ ಉದ್ದೇಶವಾಗಿದೆ.
ಈ ನಿಯೋಗದಲ್ಲಿ ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್‌ಲಾಲ್, ಪ್ರಧಾನ್ ಬರುವಾ, ಹೇಮಾಂಗ್ ಜೋಶಿ, ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟ್ಟಾಸ್ ಮತ್ತು ಮಾಜಿ ರಾಯಭಾರಿ ಮೋಹನ್ ಕುಮಾರ್ ಇದ್ದಾರೆ.
ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ನೇತೃತ್ವದ ಮತ್ತೊಂದು ನಿಯೋಗವು ಯುಎಇ, ಲಿಬಿರಿಯಾ, ಕಾಂಗೊ ಮತ್ತು ಸಿಯಾರಾ ಲಿಯೊನ್‌ಗೆ ಭೇಟಿ ನೀಡಲು ನಿರ್ಗಮಿಸಿತು. ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸದಸ್ಯರ ಏಳು ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.