ADVERTISEMENT

India Pakistan Tensions: ಪಾಕ್‌ನ ಎಫ್‌–16 ಹೊಡೆದುರುಳಿಸಿದ IAF

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2025, 18:18 IST
Last Updated 8 ಮೇ 2025, 18:18 IST
<div class="paragraphs"><p>ಪಾಕ್‌ಗೆ ಎಫ್‌–16: </p></div>

ಪಾಕ್‌ಗೆ ಎಫ್‌–16:

   

ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ನಡೆಸಿದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯ ‘ಆಪರೇಷನ್‌ ಸಿಂಧೂರ್‘ಗೆ ಪ್ರತ್ಯುತ್ತರ ನೀಡಲು ಮುಂದಾದ ಪಾಕಿಸ್ತಾನದ ಎಫ್‌–16 ವಿಮಾನವನ್ನು ಭಾರತೀಯ ವಾಯು ಸೇನೆ ಗುರುವಾರ ಸಂಜೆ ಹೊಡೆದುರುಳಿಸಿದೆ.

ಜಮ್ಮು ಪ್ರದೇಶದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪ್ರಯತ್ನ ನಡಸಿದ ಪಾಕಿಸ್ತಾನ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ. ತನ್ನ ಅತ್ಯಾಧುನಿಕ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಹಾರಿಸಿ, ಪಾಕಿಸ್ತಾನ ಸೇನೆಯ ದಾಳಿಯ ಯತ್ನವನ್ನು ವಿಫಲಗೊಳಿಸಿದೆ. ಸಂಜೆ ಪಾಕಿಸ್ತಾನ ಕಳುಹಿಸಿದ ಎಫ್‌–16 ಅನ್ನು ಭಾರತೀಯ ವಾಯು ಸೇನೆ ಹೊಡೆದುರುಳಿಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಪಾಕಿಸ್ತಾನದ ಸರಗೋಧ ವಾಯುನೆಲೆಯಿಂದ ಈ ಫೈಟರ್ ಜೆಟ್ ಹಾರಾಟ ಆರಂಭಿಸಿತ್ತು. ಇದು ಅಂತರರಾಷ್ಟ್ರೀಯ ಗಡಿ ರೇಖೆಯಿಂದ 270 ಕಿ.ಮೀ. ದೂರದಲ್ಲಿದೆ.

ಅಮೆರಿಕ ತಯಾರಿಸಿದ ಎಫ್‌–16 ಯುದ್ಧವಿಮಾನವು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 1980ರಲ್ಲಿ ಈ ಯುದ್ಧವಿಮಾನವನ್ನು ಪಾಕಿಸ್ತಾನ ಖರೀದಿಸಿತ್ತು. ನಂತರದ ದಿನಗಳಲ್ಲಿ ಈ ಯುದ್ಧವಿಮಾನಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಯಿತು. 2019ರ ಬಾಲಾಕೋಟ್‌ ವಾಯು ದಾಳಿಯ ಸಂದರ್ಭದಲ್ಲಿ ಭಾರತದ ಮಿಗ್‌–21 ಯುದ್ಧ ವಿಮಾನದ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದ ಎಫ್‌–16 ಹೊಡೆದುರುಳಿಸಿದ್ದರು. 1971ರ ಯುದ್ಧದ ನಂತರ ಎರಡು ರಾಷ್ಟ್ರಗಳ ನಡುವಿನ ಯುದ್ಧ ಇದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.