ADVERTISEMENT

Photos| ತೈಲ ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಸೈಕಲ್‌ ಜಾಥಾ

ತೈಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಸೇರಿದಂತೆ 15 ಪಕ್ಷಗಳು ದೆಹಲಿಯಲ್ಲಿ ಸೈಕಲ್‌ ಜಾಥಾ ನಡೆಸುವ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟಿಸಿದವು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದಿಗ್ವಿಜಯ ಸಿಂಗ್‌, ರಣದೀಪ್‌ ಸಿಂಗ್‌ ಸುರ್ಜೆವಾಲ ಸೇರಿದಂತೆ ಹಲವರು ಈ ಜಾಥಾದಲ್ಲಿ ಭಾಗವಹಿಸಿದ್ದರು.

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 8:15 IST
Last Updated 3 ಆಗಸ್ಟ್ 2021, 8:15 IST
ತೈಲ ಬೆಲೆ ವಿರುದ್ಧದ ಬಿತ್ತಿಪತ್ರದೊಂದಿಗೆ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ (ಎಎಫ್‌ಪಿ)
ತೈಲ ಬೆಲೆ ವಿರುದ್ಧದ ಬಿತ್ತಿಪತ್ರದೊಂದಿಗೆ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ (ಎಎಫ್‌ಪಿ)   
ತೈಲ ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ವಿರೋಧ ಪಕ್ಷಗಳು ಸೈಕಲ್‌ ಜಾಥಾ ನಡೆಸಿ ಪ್ರತಿಭಟಿಸಿದವು. ಚಿತ್ರದಲ್ಲಿ ರಾಹುಲ್‌ ಗಾಂಧಿ ಅವರು ಸೈಕಲ್‌ ಏರಿ ಹೊರಟಿರುವುದನ್ನು ಕಾಣಬಹುದು. (ಚಿತ್ರ @RahulGandhi)
ದೆಹಲಿಯಲ್ಲಿ 15 ಪಕ್ಷಗಳ ನಾಯಕರಿಗೆ ಕಾಂಗ್ರೆಸ್‌ ಆಯೋಜಿಸಿದ್ದ ಉಪಾಹಾರದ ನಂತರ ಎಲ್ಲರೂ ಸೈಕಲ್ ಮೂಲಕ ಸಂಸತ್‌ಗೆ ಜಾಥಾ ಕೈಗೊಂಡರು. (ಚಿತ್ರ @RahulGandhi)
ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೆವಾಲ (ಪಿಟಿಐ)
ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಗಾಂಧಿ (ಎಎಫ್‌ಪಿ)
ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌
ಸಂಸತ್‌ಗೆ ಸೈಕಲ್‌ ಜಾಥಾದಲ್ಲಿ ಬಂದಿದ್ದ ವಿರೋಧ ಪಕ್ಷದ ನಾಯಕರು, ಅವುಗಳನ್ನು ಸಂಸತ್‌ನ ಹೊರಗೆ ನಿಲ್ಲಿಸಿದ್ದರು. ತೈಲ ಬೆಲೆ ಏರಿಕೆ ವಿರುದ್ಧದ ಬಿತ್ತಿ ಪತ್ರಗಳನ್ನು ಚಿತ್ರದಲ್ಲಿ ಕಾಣಬಹುದು (ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.