ADVERTISEMENT

ಮರಿಯಂ ನವಾಜ್‌ ಸೇರಿ ಪ್ರಮುಖ ನಾಯಕರ ವಿರುದ್ಧ ಪ್ರಕರಣ

ಪಿಟಿಐ
Published 15 ಡಿಸೆಂಬರ್ 2020, 14:20 IST
Last Updated 15 ಡಿಸೆಂಬರ್ 2020, 14:20 IST
ಮರಿಯಂ ನವಾಜ್‌
ಮರಿಯಂ ನವಾಜ್‌   

ಲಾಹೋರ್‌: ಮಿನಾರ್‌–ಇ–ಪಾಕಿಸ್ತಾನ್‌ ರ್‍ಯಾಲಿಯ ಸಂದರ್ಭದಲ್ಲಿ ರಾಷ್ಟ್ರೀಯ ಆಸ್ತಿಯೊಂದಕ್ಕೆ ಹಾನಿ ಮಾಡಿದ್ದಾರೆ ಹಾಗೂ ಕೋವಿಡ್‌–19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪಿಎಂಎಲ್‌–ಎನ್‌ ಪಕ್ಷದ ಉಪಾಧ್ಯಕ್ಷೆ ಮರಿಯಂ ನವಾಜ್‌, ಮಾಜಿ ಪ್ರಧಾನಿ ಶಾಹಿದ್‌ ಖಾಕನ್‌ ಅಬ್ಬಾಸಿ ಸೇರಿದಂತೆ ಪಾಕಿಸ್ತಾನ ಡೆಮಾಕ್ರಟಿಕ್‌ ಅಭಿಯಾನದ ಪ್ರಮುಖ ನಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

300ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿರ್ಬಂಧವಿದ್ದರೂ, ಭಾನುವಾರ ಲಾಹೋರ್‌ನಲ್ಲಿ ವಿಪಕ್ಷ ಮೈತ್ರಿಕೂಟವು ರ್‍ಯಾಲಿ ನಡೆಸಿತ್ತು. ಪ್ರಧಾನಿ ಇಮ್ರಾನ್‌ ಖಾನ್‌ ಪದತ್ಯಾಗ ಮಾಡಬೇಕು ಎಂದು ಆಗ್ರಹಿಸಿರುವ ವಿಪಕ್ಷಗಳು ಜ.31ರ ಗಡುವನ್ನು ನೀಡಿದ್ದು, ನಂತರದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ. ಮಿನಾರ್‌–ಇ–ಪಾಕಿಸ್ತಾನ್‌ ಪ್ರವೇಶದ್ವಾರದಲ್ಲಿರುವ ಗೇಟ್‌ನ ಚಿಲಕವನ್ನು ಮುರಿದಿರುವುದಕ್ಕೆ ಲಾಹೋರ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT