ADVERTISEMENT

ಆರ್‌ಟಿಐ: ಅರ್ಜಿ ಸಲ್ಲಿಸುವಲ್ಲಿ ಮಹಿಳೆಯರು ಹಿಂದೆ

ಎಂಟು ವರ್ಷಗಳಲ್ಲಿ ಒಟ್ಟು 1.59 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಪಿಟಿಐ
Published 18 ನವೆಂಬರ್ 2021, 8:54 IST
Last Updated 18 ನವೆಂಬರ್ 2021, 8:54 IST
ಆರ್‌ಟಿಐ
ಆರ್‌ಟಿಐ   

ನವದೆಹಲಿ: ಎಂಟು ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) 1.59 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 11,376 (ಶೇ 7ರಷ್ಟು) ಅರ್ಜಿಗಳನ್ನು ಮಹಿಳೆಯರು ಸಲ್ಲಿಸಿದ್ದರೆ, ಉಳಿದವು ಪುರುಷರು ಸಲ್ಲಿಸಿದ ಅರ್ಜಿಗಳಾಗಿವೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ.

2013ರ ಏಪ್ರಿಲ್‌ 22ರಿಂದ 2021ರ ನವೆಂಬರ್‌ 12ರವರೆಗೆ ಒಟ್ಟು 1,59,107 ಅರ್ಜಿಗಳು ಆರ್‌ಟಿಐ ಅಡಿಯಲ್ಲಿ ಸಲ್ಲಿಕೆಯಾಗಿವೆ ಎಂದು ಸಚಿವಾಲಯ ಆರ್‌ಟಿಐ ಅರ್ಜಿಗೆ ಉತ್ತರಿಸಿದೆ.

ನಿವೃತ್ತ ಕಮಾಂಡರ್‌ ಲೋಕೇಶ್‌ ಕೆ. ಬಾತ್ರಾ ಅವರು ಸಲ್ಲಿಸಿದ್ದ ಆರ್‌ಟಿಐಗೆ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

‘ಮಾಹಿತಿ ಪಡೆಯಲು ಇರುವ ಹಕ್ಕಿನ ಬಗ್ಗೆ ಸ್ತ್ರೀಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂಬುದನ್ನು ಇಲಾಖೆ ನೀಡಿರುವ ದತ್ತಾಂಶಗಳು ತೋರಿಸುತ್ತವೆ’ ಎಂದು ಬಾತ್ರಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.