ನವದೆಹಲಿ: ದೇಶದಾದ್ಯಂತ ಶುಕ್ರವಾರದ ವೇಳೆಗೆ 126 ಕೋಟಿ ಡೋಸ್‌ಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಶುಕ್ರವಾರ ಒಂದೇ ದಿನ ರಾತ್ರಿ 7 ಗಂಟೆ ವೇಳೆಗೆ 66,58,055 ಡೋಸ್ ಲಸಿಕೆ ನೀಡಲಾಗಿದೆ. ಅಂತಿಮ ವರದಿ ವೇಳೆಗೆ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಸಚಿವಾಲಯ ತಿಳಿಸಿದೆ.
ಓದಿ:ಓಮೈಕ್ರಾನ್ ಕುರಿತ ಜನರ ಪ್ರಶ್ನೆಗಳಿಗೆ ಕೇಂದ್ರದ ಉತ್ತರ: ಇಲ್ಲಿದೆ ವಿವರಣೆ
ಸಚಿವಾಲಯದ ದತ್ತಾಂಶಗಳ ಪ್ರಕಾರ ದೇಶದಲ್ಲಿ ದಿನವೊಂದರಲ್ಲಿ ಸರಾಸರಿ 59.32 ಲಕ್ಷ ಡೋಸ್ ಲಸಿಕೆ ನವೆಂಬರ್‌ನಲ್ಲಿ ನೀಡಲಾಗಿದೆ. ಮೇ ತಿಂಗಳಲ್ಲಿ ದಿನವೊಂದರ ಸರಾಸರಿ ಲಸಿಕೆ ನೀಡಿಕೆ 19.69ರಷ್ಟಿತ್ತು. ಅಕ್ಟೋಬರ್‌ನಲ್ಲಿ ದಿನವೊಂದರ ಸರಾಸರಿ 55.77 ಲಕ್ಷ ಡೋಸ್ ಇದ್ದರೆ, ಸೆಪ್ಟೆಂಬರ್‌ನಲ್ಲಿ 78.69 ಲಕ್ಷ ಹಾಗೂ ಆಗಸ್ಟ್‌ನಲ್ಲಿ ದಿನವೊಂದರ ಸರಾಸರಿ 59.29 ಲಕ್ಷ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.