ADVERTISEMENT

1.55 ಕೋಟಿ ನರೇಗಾ ಕಾರ್ಮಿಕರ ಹೆಸರು ಡಿಲೀಟ್‌: ಕೇಂದ್ರ ಸರ್ಕಾರ ಮಾಹಿತಿ

ಪಿಟಿಐ
Published 4 ಫೆಬ್ರುವರಿ 2025, 15:56 IST
Last Updated 4 ಫೆಬ್ರುವರಿ 2025, 15:56 IST
   

ನವದೆಹಲಿ: 2022ರಿಂದ 2024ರ ಅವಧಿಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ (ನರೇಗಾ) 1.55 ಕೋಟಿ ಸಕ್ರಿಯ ಕಾರ್ಮಿಕರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ಮಂಗಳವಾರ ಮಾಹಿತಿ ನೀಡಿದೆ. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್‌ ಅವರು, ಉದ್ಯೋಗ ಕಾರ್ಡ್‌ಗಳ ದುರುಪಯೋಗ ತಡೆಗಾಗಿ ಮತ್ತು ನೈಜ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಫೆ.1ರವರೆಗೆ 13.41 ಕೋಟಿ ಸಕ್ರಿಯ ಕಾರ್ಮಿಕರ ಪೈಕಿ 13.34 ಕೋಟಿ (99.47%) ಕಾರ್ಮಿಕರ ಹೆಸರಿನ ಜೊತೆ ಆಧಾರ್‌ ಸಂಖ್ಯೆಯನ್ನು ಜೋಡಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಆರ್ಥಿಕ ವರ್ಷ ಅಳಿಸಿದ ಹೆಸರುಗಳ ಸಂಖ್ಯೆ

2022–23: 86,17,887

2023–24: 68,86,532

ಒಟ್ಟು 1,55,04,419

ಕಾರಣ

*ಸುಳ್ಳು ಅಥವಾ ತಪ್ಪು ಮಾಹಿತಿ ಇರುವ ಉದ್ಯೋಗ ಕಾರ್ಡ್‌

* ಗ್ರಾಮ ಪಂಚಾಯಿತಿಯಿಂದ ಕುಟುಂಬಗಳ ಶಾಶ್ವತ ಸ್ಥಳಾಂತರ

*ಗ್ರಾಮಗಳನ್ನು ‘ನಗರ’ ಎಂದು ವರ್ಗೀಕರಿಸಿದ ಕಾರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.