ADVERTISEMENT

ದೇಶದಾದ್ಯಂತ 2 ಕೋಟಿ ಮಕ್ಕಳಿಗೆ ಕೋವಿಡ್‌ ಲಸಿಕೆ: ಮನ್‌ಸುಖ್ ಮಾಂಡವೀಯಾ

ಪಿಟಿಐ
Published 18 ಫೆಬ್ರುವರಿ 2022, 15:35 IST
Last Updated 18 ಫೆಬ್ರುವರಿ 2022, 15:35 IST
ಮನ್‌ಸುಖ್‌ ಮಾಂಡವೀಯಾ
ಮನ್‌ಸುಖ್‌ ಮಾಂಡವೀಯಾ   

ನವದೆಹಲಿ: ದೇಶದಾದ್ಯಂತ 15ರಿಂದ 18ರ ವಯೋಮಾನದ ಸುಮಾರು 2 ಕೋಟಿ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಶುಕ್ರವಾರ ತಿಳಿಸಿದ್ದಾರೆ.

ಈ ವಯೋಮಾನದ 2 ಕೋಟಿ ಯುವಜನರು ಕೋವಿಡ್‌ ವಿರುದ್ಧ ಈಗ ಲಸಿಕೆ ಪಡೆಯುವ ಮೂಲಕ ಯುವ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಸಿದಂತಾಗಿದೆ ಎಂದು ಮಾಂಡವೀಯಾ ಟ್ವೀಟ್‌ ಮಾಡಿದ್ದಾರೆ.

ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ,ಈ ವಯೋಮಾನದ ಶೇ 70ರಷ್ಟು ಮಂದಿ ಈ ವರೆಗೆ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.

ADVERTISEMENT

2021–22ರಲ್ಲಿ ಈ ವಯೋಮಾನದ 7.4 ಕೋಟಿ ಯುವಜನರು ಲಸಿಕೆಯ ಫಲಾನುಭವಿಗಳಾಗಲಿದ್ದಾರೆ ಎಂದುರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಅಂದಾಜಿಸಿದೆ. ಈ ವಯೋಮಾನದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ದೇಶದಾದ್ಯಂತ ಜನವರಿ 3ರಿಂದಲೇ ಆರಂಭವಾಗಿದೆ.

ದೇಶದಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ ಸುಮಾರು 37.66 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ಪ್ರಾಥಮಿಕ ವರದಿ ವರದಿ ಪ್ರಕಾರ, ದೇಶದಲ್ಲಿ ಒಟ್ಟು 174.64 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.