ADVERTISEMENT

ದೇಶದಾದ್ಯಂತ 4 ಕೋಟಿ ಕೋವಿಡ್–19 ಮಾದರಿ ಪರೀಕ್ಷೆ: ಐಸಿಎಂಆರ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 9:29 IST
Last Updated 29 ಆಗಸ್ಟ್ 2020, 9:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ: ದೇಶದಾದ್ಯಂತ ಇದುವರೆಗೆ ಒಟ್ಟು 4.04 ಕೋಟಿ ಜನರಿಗೆ ಕೋವಿಡ್‌–19 ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆಮಂಡಳಿ (ಐಸಿಎಂಆರ್‌) ಮಾಹಿತಿ ನೀಡಿದೆ.

‘ನಿನ್ನೆ ನಡೆಸಲಾಗಿರುವ 9,28,761 ಪರೀಕ್ಷೆ ಸೇರಿದಂತೆ ಆಗಸ್ಟ್‌ 28ರ ವರೆಗೆ ಒಟ್ಟು 4,04,06,609 ಮಾದರಿ ಪರೀಕ್ಷೆಯನ್ನು ನಡೆಸಲಾಗಿದೆ’ ಎಂದು ಟ್ವಿಟರ್‌‌ ಮೂಲಕ ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ,ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 76,472 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 34 ಲಕ್ಷ ದಾಟಿದೆ.ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 62,550ಕ್ಕೆ ಏರಿಕೆಯಾಗಿದೆ.

ADVERTISEMENT

ಇದುವರೆಗೆ 26,48,999 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 7,52,424 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.