ADVERTISEMENT

ಕಳೆದ 24 ಗಂಟೆಗಳಲ್ಲಿ 1.15 ಲಕ್ಷ ಜನರಿಗೆ ಕೋವಿಡ್-19 ಪರೀಕ್ಷೆ: ಐಸಿಎಂಆರ್

ಏಜೆನ್ಸೀಸ್
Published 15 ಜೂನ್ 2020, 6:19 IST
Last Updated 15 ಜೂನ್ 2020, 6:19 IST
ಕೋವಿಡ್-19 ಮಾದರಿ ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೋವಿಡ್-19 ಮಾದರಿ ಪರೀಕ್ಷೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ದೇಶದಾದ್ಯಂತ ಲಾಕ್‌ಡೌನ್‌ ತೆರವುಗೊಂಡ ಬಳಿಕ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಒಟ್ಟು 1,15,519 ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ

ದೇಶದಲ್ಲಿ ಈವರೆಗೆ ಒಟ್ಟು 57,74,133 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 24 ಗಂಟೆಗಳಲ್ಲಿ 1,15,519 ಮಾದರಿಗಳನ್ನು ಪರೀಕ್ಷಿಸಿಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ದೇಶದಲ್ಲಿ 21,494 ಕೋವಿಡ್‌ ಚಿಕಿತ್ಸೆಗೆಂದು ಮೀಸಲಿರಿಸಿರುವ ವೆಂಟಿಲೇಟರ್‌ಗಳಿದ್ದು, 60,848 ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 958 ಕೋವಿಡ್–19 ಆಸ್ಪತ್ರೆಗಳ ಪೈಕಿ 1.67 ಲಕ್ಷ ಐಸೊಲೇಷನ್‌ ಹಾಸಿಗೆಗಳು, 21,614 ಐಸಿಯುಗಳು, 73,469 ಆಮ್ಲಜನಕ ಪೂರೈಕೆ ಸವಲತ್ತಿರುವ ಹಾಸಿಗೆಗಳು ಲಭ್ಯವಿದೆ.

ADVERTISEMENT

2,313 ಕೋವಿಡ್–19 ಆರೋಗ್ಯ ಕೇಂದ್ರಗಳ ಪೈಕಿ 1.33 ಲಕ್ಷ ಐಸೊಲೇಷನ್‌ ಹಾಸಿಗೆಗಳು, 10,748 ಐಸಿಯುಗಳು, 46,635 ಆಮ್ಲಜನಕ ಪೂರೈಕೆ ಸವಲತ್ತಿರುವ ಹಾಸಿಗೆಗಳು ಇವೆ. ಇನ್ನುಳಿದಂತೆ 7,525 ಕೋವಿಡ್–19 ಚಿಕಿತ್ಸಾ ಕೇಂದ್ರಗಳಲ್ಲಿ 7.10 ಲಕ್ಷ ಐಸೊಲೇಷನ್ ಹಾಸಿಗೆಗಳು ಕೋವಿಡ್-19 ಚಿಕಿತ್ಸೆಗೆ ಲಭ್ಯವಿದೆ.

ಜೂನ್ 15ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 11,502 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 3,32,424ಕ್ಕೆ ಏರಿಕೆಯಾಗಿದೆ. ಈ ಪೈಕಿ 1,53,106 ಸಕ್ರಿಯ ಪ್ರಕರಣಗಳಿದ್ದು, 1,69,798 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ 9,520ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.