ADVERTISEMENT

ಉದ್ಯೋಗದ ಹೆಸರಲ್ಲಿ ವಂಚನೆ: ವಿವಿಧ ದೇಶಗಳಲ್ಲಿ 6,700ಕ್ಕೂ ಅಧಿಕ ಭಾರತೀಯರ ರಕ್ಷಣೆ

ಪಿಟಿಐ
Published 11 ಡಿಸೆಂಬರ್ 2025, 16:09 IST
Last Updated 11 ಡಿಸೆಂಬರ್ 2025, 16:09 IST
ಕೀರ್ತಿ ವರ್ಧನ್‌ ಸಿಂಗ್‌
ಕೀರ್ತಿ ವರ್ಧನ್‌ ಸಿಂಗ್‌   

ನವದೆಹಲಿ: ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನಲ್ಲಿ ಸಿಲುಕಿದ್ದ 6,700ಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್‌ ಸಿಂಗ್‌ ಅವರು, ‘ಉದ್ಯೋಗದ ಆಮಿಷವೊಡ್ಡಿ ವಂಚಿಸುತ್ತಿರುವ ಕೆಲ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯರನ್ನು ಸಂಪರ್ಕಿಸಿ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನಂಥ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಸೆಳೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.

‘ಉದ್ಯೋಗದ ಆಸೆಯಿಂದ ಹೋದವರನ್ನು ವಿದೇಶಗಳಲ್ಲಿ ಸೈಬರ್‌ ಅಪರಾಧ ಮತ್ತು ಇತರ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. 

ADVERTISEMENT

‘ಜನರು ಸ್ವಯಂಪ್ರೇರಿತವಾಗಿ ನಕಲಿ ಸಂಸ್ಥೆಗಳು ಮತ್ತು ಏಜೆಂಟ್‌ಗಳ ಮೂಲಕ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ತೆರಳಿರುವುದರಿಂದ, ಅಲ್ಲಿ ಸಿಲುಕಿರುವ ಭಾರತೀಯರ ಸಂಖ್ಯೆ ನಿಖರವಾಗಿ ತಿಳಿದಿಲ್ಲ’ ಎಂದು ತಿಳಿಸಿದ್ದಾರೆ.

ಕಾಂಬೋಡಿಯಾದಿಂದ 2,265, ಲಾವೋಸ್‌ನಿಂದ 2290 ಮತ್ತು ಮ್ಯಾನ್ಮಾರ್‌ನಿಂದ 2,165 ಜನರನ್ನು ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.