ADVERTISEMENT

ಏ.1ರಿಂದ ಪ್ಯಾರಸಿಟಮಾಲ್ ಸೇರಿ 800ಕ್ಕೂ ಅಧಿಕ ಔಷಧಗಳ ಬೆಲೆ ಶೇ 10.7 ರಷ್ಟು ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2022, 11:22 IST
Last Updated 26 ಮಾರ್ಚ್ 2022, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಗತ್ಯ ಔಷಧಿಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ 1ರಿಂದ ಸೋಂಕು ಹಾಗೂ ನೋವು ನಿವಾರಕಗಳು ಸೇರಿದಂತೆ ಸುಮಾರು 800 ಅಗತ್ಯ ಔಷಧಿಗಳ ಬೆಲೆ ಏರಿಕೆ ಆಗಲಿದೆ.

2021ರ ಕ್ಯಾಲೆಂಡರ್ ವರ್ಷಕ್ಕೆ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯೂಪಿಐ) ಶೇ 10.7ರಷ್ಟು ಬೆಲೆ ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿರ್ಧರಿಸಿದೆ .

ಈ ನಿರ್ಧಾರದ ಹಿನ್ನೆಲೆಯಲ್ಲಿ, ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಬರುವ ಸುಮಾರು 800 ಔಷಧಿಗಳ ಬೆಲೆಗಳು ಏಪ್ರಿಲ್ 1 ರಿಂದ ಶೇ 10.7 ರಷ್ಟು ಹೆಚ್ಚಾಗಲಿದೆ.

ADVERTISEMENT

ಸೋಂಕು, ಜ್ವರ, ಚರ್ಮ ರೋಗ, ಹೃದ್ರೋಗ, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆಗಳು ಹೆಚ್ಚಾಗಲಿವೆ.

ಬೆಲೆ ಏರಿಕೆಯಾಗುವ ಔಷಧಗಳ ಪಟ್ಟಿಯಲ್ಲಿ, ಅಜಿಥ್ರೊಮೈಸಿನ್, ಹೈಡ್ರೊಕ್ಲೊರೈಡ್, ಪ್ಯಾರಸಿಟಮಾಲ್, ಫೆನೊಬಾರ್ಬಿಟೊನ್‌ ಮತ್ತು ಫೆನಿಟೊಯಿನ್ ಸೋಡಿಯಂನಂತಹ ಔಷಧಗಳೂ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.