ADVERTISEMENT

ಲೋಕಸಭೆಯಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಮೀಸಲಾತಿಗೆ ಓವೈಸಿ ಆಗ್ರಹ

ಪಿಟಿಐ
Published 22 ಏಪ್ರಿಲ್ 2024, 6:10 IST
Last Updated 22 ಏಪ್ರಿಲ್ 2024, 6:10 IST
<div class="paragraphs"><p>ಅಸಾದುದ್ದೀನ್‌ ಓವೈಸಿ</p></div>

ಅಸಾದುದ್ದೀನ್‌ ಓವೈಸಿ

   

ಕಿಶಾನ್‌ಗಂಜ್(ಬಿಹಾರ): ಅಲ್ಪಸಂಖ್ಯಾತ ಸಮುದಾಯದ ಅತ್ಯಂತ ಕಡಿಮೆ ಮಹಿಳೆಯರು ಸಂಸತ್ ಸದಸ್ಯರಾಗಿದ್ದಾರೆ ಎಂದು ಹೇಳಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಅಲ್ಪಸಂಖ್ಯಾತ ಮಹಿಳೆಯರಿಗೆ ಮೀಸಲಾತಿಗೆ ಒತ್ತಾಯಿಸಿದ್ದಾರೆ.

ಬಿಹಾರದಲ್ಲಿ ಮುಸ್ಲಿಂ ಸಮುದಾಯದವರು ಬಹುಸಂಖ್ಯಾತರಾಗಿರುವ ಏಕೈಕ ಕ್ಷೇತ್ರ ಕಿಶನ್‌ಗಂಜ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮ ಪಕ್ಷವು ಮಹಿಳೆಯರ ವಿರುದ್ಧವಾಗಿದೆ ಎಂದು ತಪ್ಪಾಗಿ ಬಿಂಬಿಸಲು ಯತ್ನಿಸಿವೆ. 2004ರ ಚುನಾವಣೆಯಲ್ಲಿ ಸಿಕಂದರಾಬಾದ್‌ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ನಾವು ಟಿಕೆಟ್ ನೀಡಿದ್ದೆವು ಎಂದಿದ್ದಾರೆ.

ADVERTISEMENT

‘ಸ್ವಾತಂತ್ರ್ಯ ಬಂದಾಗಿನಿಂದ 17ನೇ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದರೆ, ಮುಸ್ಲಿಂ ಸಮುದಾಯದಿಂದ ಸಂಸದರಾಗಿ ಆಯ್ಕೆಯಾಗಿರುವ ಮಹಿಳೆಯರ ಸಂಖ್ಯೆ 20 ಮಾತ್ರ. ಮುಸ್ಲಿಂ ಮಹಿಳೆಯರಿಗೆ ಯಾಕೆ ಮೀಸಲಾತಿ ಕೊಟ್ಟಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಇದೇವೇಳೆ, ನರೇಂದ್ರ ಮೋದಿ ಸರ್ಕಾರ ಮಂಡಿಸಿದ ನಾರಿ ಶಕ್ತಿ ವಂದನಾ ಅಧಿನಿಯಮ ವಿಧೇಯಕದ ಮಂಡನೆ ವೇಳೆ ಎದುರಿಸಿದ ಅಪಹಾಸ್ಯವನ್ನು ಓವೈಸಿ ಬಿಚ್ಚಿಟ್ಟರು.

ನೀವು ತಿದ್ದುಪಡಿ ತರಲು ಬಯಸುತ್ತಿದ್ದೀರೇ? ನಿಮ್ಮ ತಿದ್ದುಪಡಿ ಪ್ರಸ್ತಾವನೆಗೆ ಯಾರದ್ದಾದರೂ ಬೆಂಬಲವಿದೆಯೇ ಎಂದು ಸ್ಪೀಕರ್ ಓಂ ಬಿರ್ಲಾ ನನ್ನನ್ನು ಪ್ರಶ್ನಿಸಿದರು. ಆಗ ನಾನು ಅಲ್ಲಾಹ್ ನನ್ನ ಬೆಂಬಲಕ್ಕೆ ಇದ್ದಾರೆ ಎಂದು ಉತ್ತರ ಕೊಟ್ಟೆ ಎಂಬುದಾಗಿ ಓವೈಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.