ADVERTISEMENT

ನಿರುದ್ಯೋಗ ಹೆಚ್ಚಾದಲ್ಲಿ ಯುವಜನರು ಸಿಡಿದೇಳುವ ಸಾಧ್ಯತೆ ಇದೆ: ಪಿ. ಚಿದಂಬರಂ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 15:01 IST
Last Updated 14 ಜನವರಿ 2020, 15:01 IST
ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ
ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ   

ನವದೆಹಲಿ: ‘ನಿರುದ್ಯೋಗ ಹೆಚ್ಚಾಗಿ, ಆದಾಯ ಕುಸಿತಗೊಳ್ಳುತ್ತಿದ್ದರೆ ಯುವಜನರು ಮತ್ತು ವಿದ್ಯಾರ್ಥಿಗಳ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ಹಿರಿಯ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿರುವ ಅವರು, ‘ಕುಸಿಯುತ್ತಿರುವ ಆರ್ಥಿಕ ಸ್ಥಿತಿ ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿದೆ.ಸೋಮವಾರದ ಸರ್ಕಾರಿ ಅಂಕಿ–ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರವು 2019ರ ಡಿಸೆಂಬರ್‌ನಲ್ಲಿ ಶೇ 7.35ರಷ್ಟು ಏರಿದೆ. ಮುಖ್ಯವಾಗಿ ಆಹಾರ ಮತ್ತು ತರಕಾರಿಗಳ ಬೆಲೆ ಶೇ 60ರಷ್ಟು ಹೆಚ್ಚಳವಾಗಿವೆ. ಇದೇ ಬಿಜೆಪಿ ಭರವಸೆ ನೀಡಿದ್ದ ‘ಅಚ್ಛೇ ದಿನ್’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT