ADVERTISEMENT

ಎಚ್‌ಎಎಲ್‌ ಆಡಳಿತ ಮಂಡಳಿ–ಕಾರ್ಮಿಕ ಸಂಘಟನೆ ನಡುವೆ ಡಿ. 5 ರಂದು ಒಡಂಬಡಿಕೆ ಸಾಧ್ಯತೆ

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ

ಪಿಟಿಐ
Published 2 ಡಿಸೆಂಬರ್ 2019, 18:30 IST
Last Updated 2 ಡಿಸೆಂಬರ್ 2019, 18:30 IST
ಎಚ್‌ಎಎಲ್‌
ಎಚ್‌ಎಎಲ್‌   

ನವದೆಹಲಿ: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳ ಮಾತುಕತೆಯ ನಂತರ ಕಾರ್ಮಿಕರ ಮುಷ್ಕರ ಮುಕ್ತಾಯದ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಡಿಸೆಂಬರ್‌ 5 ರಂದು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಾಜ್ಯಸಬೆಯಲ್ಲಿ ಸೋಮವಾರ ಹೇಳಿದರು.

ಅಧಿಕಾರಿಗಳ ವೇತನಕ್ಕೆ ಸಮನಾಗಿ 2017ರ ಜನವರಿಯಿಂದ ಜಾರಿಗೆ ಬರುವಂತೆ ತಮ್ಮ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಅಕ್ಟೋಬರ್‌ 14 ರಿಂದ 22ರ ವರೆಗೆ ಕಾರ್ಮಿಕರು ಮುಷ್ಕರ ನಡೆಸಿದ್ದರು. ನಂತರ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಅವರು ಕೆಲಸವನ್ನು ಪುನರ್‌ ಆರಂಭಿಸಿದ್ದರು ಎಂದು ಪ್ರಶ್ನೋತ್ತರ ವೇಳೆಯಲ್ಲಿ ಸಿಂಗ್‌ ಹೇಳಿದರು.

‘ಎಚ್‌ಎಎಲ್‌ ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ 13 ಸುತ್ತು ಮಾತುಕತೆ ನಡೆದಿದೆ. ನವೆಂಬರ್‌ 28 ಮತ್ತು 29 ರಂದು ಕೊನೆಯ ಸುತ್ತಿನ ಮಾತುಕತೆ ನಡೆದಿದ್ದು, ಆಡಳಿತ ಮಂಡಳಿಯ ವೇತನ ಕೊಡುಗೆಯನ್ನು ಕಾರ್ಮಿಕ ಸಂಘಟನೆಗಳು ಒಪ್ಪಿಕೊಂಡಿವೆ. ಮುಂದಿನ ಸಭೆ ಡಿಸೆಂಬರ್‌ 5 ರಂದು ನಡೆಯಲಿದ್ದು, ಅಂದು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.