ನವದೆಹಲಿ: ಪದ್ಮ ಭೂಷಣ ಪಂಡಿತ್ ರಾಜನ್ ಮಿಶ್ರಾ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನವದೆಹಲಿಯ ಸಂತ ಸ್ಟೀಫನ್ಸ್ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದರು ಎಂದು ಮಿಶ್ರಾ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪಂ. ಮಿಶ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಪಂ.ರಾಜನ್–ಸಾಜನ್ ಮಿಶ್ರಾ ಸಹೋದರರು ಬನಾರಸ್ ಘರಾಣೆಯ ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದರು. ಪ್ರತಿ ಸಂಗೀತ ಕಛೇರಿಯನ್ನೂ ಆರಂಭಿಸುವ ಮುನ್ನ ‘ಮ್ಯೂಸಿಕ್ ಈಸ್ ವರ್ಶಿಪ್ ಫಾರ್ ಅಸ್’ (ಸಂಗೀತವೇ ನಮಗೆ ಪೂಜೆ) ಎಂದು ಹೇಳಿಯೇ ಕಛೇರಿ ಆರಂಭಿಸುವುದು ಅವರ ವಿಶೇಷತೆಯಾಗಿತ್ತು.
ವಾರಣಾಸಿ ಮೂಲದ ರಾಜನ್ ಮಿಶ್ರಾ (ಜನನ: 1951) ಅವರು ತಮ್ಮ ತಾತ ಬಡೆ ರಾಮ್ ದಾಸ್‌ಜಿ ಮಿಶ್ರಾ ಅವರಿಂದ ಸಂಗೀತ ದೀಕ್ಷೆ ಪಡೆದಿದ್ದರು.
ತಂದೆ ಹನುಮಾನ್ ಪ್ರಸಾದ್ ಮಿಶ್ರಾ ಮತ್ತು ಮಾವ ಸಾರಂಗಿ ವಾದಕ ಗೋಪಾಲ್ ಪ್ರಸಾದ್ ಮಿಶ್ರಾ ಅವರಲ್ಲಿ ಸಂಗೀತವನ್ನು ಅಭ್ಯಾಸ ಮಾಡಿ ಪರಿಣತಿ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.