ADVERTISEMENT

ಪಹಲ್ಗಾಮ್‌ ದಾಳಿ | ಶಂಕಿತ ಉಗ್ರರ ಫೋಟೊ ಬಿಡುಗಡೆ: ಸುಳಿವು ಕೊಟ್ಟವರಿಗೆ ₹20 ಲಕ್ಷ

ಪಿಟಿಐ
Published 13 ಮೇ 2025, 5:43 IST
Last Updated 13 ಮೇ 2025, 5:43 IST
<div class="paragraphs"><p>ಪಹಲ್ಗಾಮ್‌ ದಾಳಿ ಶಂಕಿತ ಉಗ್ರರ ಫೋಟೊ ಬಿಡುಗಡೆ ಮಾಡಿದ ಪೊಲೀಸರು</p></div>

ಪಹಲ್ಗಾಮ್‌ ದಾಳಿ ಶಂಕಿತ ಉಗ್ರರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

   

ಚಿತ್ರಕೃಪೆ: ಪಿಟಿಐ ವಿಡಿಯೊ

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಮೂವರು ಶಂಕಿತ ಉಗ್ರರ ಪತ್ತೆಗೆ ಅವರ ಫೋಟೊಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಮಾಹಿತಿ ಕೊಟ್ಟವರಿಗೆ ₹20 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 

ADVERTISEMENT

ಏ.22ರಂದು ಪಹಲ್ಗಾಮ್‌ನಲ್ಲಿ 26 ಜನ ಅಮಾಯಕರನ್ನು ಭೀಕರವಾಗಿ ಹತ್ಯೆ ಮಾಡಿದ್ದರು. 

ಅಲ್ಲಲ್ಲಿ ಪೋಸ್ಟರ್‌ ಅಂಟಿಸಿರುವ ಪೊಲೀಸರು ‘ಭಯೋತ್ಪಾದಕ ಮುಕ್ತ ಜಮ್ಮುಕಾಶ್ಮೀರ’ ಎಂದು ಬರೆದಿದ್ದಾರೆ ಎಂದು ಇಂಡಿಯಾ ಟುಡೆ ವರದಿ ತಿಳಿಸಿದೆ. ಅಲ್ಲದೆ ಶಂಕಿತರ ಬಗ್ಗೆ ಮಾಹಿತಿ ನೀಡಿದವರ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು ಎಂದೂ ಪೊಲೀಸರು ಹೇಳಿದ್ದಾರೆ.

ಪಹಲ್ಗಾಮ್‌ನಿಂದ ಆರು ಕಿ.ಮೀ ದೂರದಲ್ಲಿರುವ ಬೈಸರನ್‌ ಹುಲ್ಲುಗಾವಲಿನಲ್ಲಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. ಕುಟುಂಬದವರ ಎದುರೇ 26 ಜನರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ 9 ಉಗ್ರರ ನೆಲೆಗಳನ್ನು ನಾಶಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.