ನವದೆಹಲಿ: ಭಯೋತ್ಪಾದನೆ ಕುರಿತು ಭಾರತದ ನಿಲುವು ದೃಢಪಡಿಸಲು ವಿವಿಧ ದೇಶಗಳಿಗೆ ತೆರಳಿದ್ದ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಇನ್ನದಾರೂ ಭದ್ರತೆ ಹಾಗೂ ವಿದೇಶಾಂಗ ನೀತಿಗಳ ಸವಾಲುಗಳ ಕುರಿತು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮುಕ್ತ ಚರ್ಚೆಗೆ ಪ್ರಧಾನಿ ಮೋದಿ ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದು, ಈಗ ಪ್ರಧಾನಿ 32 ದೇಶಗಳಿಗೆ ಕಳುಹಿಸಲಾದ ಏಳು ಸಂಸದೀಯ ನಿಯೋಗಗಳ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಕನಿಷ್ಠ ಈಗಾಲಾದರೂ ಈ ವಿಷಯಗಳ ಕುರಿತು ಮುಕ್ತ ಚರ್ಚೆಗೆ ಸಿದ್ಧರಾಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಚೀನಾ ಹಾಗೂ ಪಾಕಿಸ್ತಾನ ವಿಷಯದಲ್ಲಿ ಸಿಡಿಎಸ್ ಬಹಿರಂಗಪಸುವಿಕೆ ಹಾಗೂ ಭಾರತದ ಭವಿಷ್ಯದ ಕಾರ್ಯತಂತ್ರದಲ್ಲಿ ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸುತ್ತಾರೆಯೇ ಎಂದು ಕೇಳಿದ್ದಾರೆ.
ಪಹಲ್ಗಾಮ್ ಮೇಲಿನ ದಾಳಿಯ ನಂತರ ಭವಿಷ್ಯದಲ್ಲಿ ದೇಶದ ಭದ್ರತೆ ಹಾಗೂ ವಿದೇಶಾಂಗ ನೀತಿಯ ಸವಾಲುಗಳ ಕುರಿತು ಮುಕ್ತ ಚರ್ಚೆ ಒಪ್ಪುತ್ತೀರಾ? ದುರದೃಷ್ಟವಶಾತ್ ವಿಶೇಷ ಅಧಿವೇಶನಕ್ಕಾಗಿ ವಿಪಕ್ಷಗಳ ಒತ್ತಾಯವನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ವಿಶ್ಲೇಷಣೆ ನಡೆಸಲು 1999ರ ಕಾರ್ಗಿಲ್ ಪರಿಶೀಲನಾ ಸಮಿತಿಯಂತೆ ತಜ್ಞರ ತಂಡವನ್ನು ರಚಿಸಲಾಗುತ್ತದೆಯೇ ಎಂದು ಅವರು ಪಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.