ADVERTISEMENT

ಗಾಂಧಿ ಜೊತೆಗಿನ ವರ್ಣಚಿತ್ರ ₹ 25 ಲಕ್ಷಕ್ಕೆ ಮಾರಾಟ

ಪ್ರಧಾನಿ ಮೋದಿ ಪಡೆದ ಸ್ಮರಣಿಕೆಗಳ ಇ–ಹರಾಜು ಅಂತ್ಯ

ಪಿಟಿಐ
Published 25 ಅಕ್ಟೋಬರ್ 2019, 17:46 IST
Last Updated 25 ಅಕ್ಟೋಬರ್ 2019, 17:46 IST
ಮಹಾತ್ಮ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿರುವ ಈ ವರ್ಣಚಿತ್ರ ಇ–ಹರಾಜಿನಲ್ಲಿ ₹ 25 ಲಕ್ಷಕ್ಕೆ ಮಾರಾಟವಾಗಿದೆ– ಪಿಟಿಐ ಚಿತ್ರ
ಮಹಾತ್ಮ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿರುವ ಈ ವರ್ಣಚಿತ್ರ ಇ–ಹರಾಜಿನಲ್ಲಿ ₹ 25 ಲಕ್ಷಕ್ಕೆ ಮಾರಾಟವಾಗಿದೆ– ಪಿಟಿಐ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿರುವ ಸ್ಮರಣಿಕೆಗಳ ಪ್ರದರ್ಶನ ಮತ್ತು ಇ–ಹರಾಜಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಾತ್ಮ ಗಾಂಧಿ ಹಾಗೂ ಮೋದಿ ಇರುವ ವರ್ಣಚಿತ್ರ ₹ 25 ಲಕ್ಷಕ್ಕೆ ಮಾರಾಟವಾಗಿದೆ.

‘ಸೆ. 14ರಿಂದ ಆರಂಭಗೊಂಡಿದ್ದ ಈ ಪ್ರದರ್ಶನ ಮತ್ತು ಹರಾಜು ಶುಕ್ರವಾರ ಕೊನೆಗೊಂಡಿತು. ಸ್ಮರಣಿಕೆಗಳ ಮಾರಾಟದಿಂದ ಬರುವ ಹಣವನ್ನು ನಮಾಮಿ ಗಂಗೆ ಮಿಷನ್‌ ಯೋಜನೆಗೆ ನೀಡಲಾಗುತ್ತದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇಲ್ಲಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನಲ್ಲಿಪ್ರದರ್ಶನಕ್ಕೆ ಇಡಲಾಗಿದ್ದ ಒಟ್ಟು 2,772 ಸ್ಮರಣಿಕೆಗಳೂ ಮಾರಾಟವಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ADVERTISEMENT

ಪ್ರದರ್ಶನಕ್ಕೆ ಇಡಲಾಗಿದ್ದ ಸ್ಮರಣಿಕೆಗಳು

ವರ್ಣಚಿತ್ರಗಳು, ಶಿಲ್ಪಕಲಾಕೃತಿಗಳು, ಶಾಲುಗಳು, ಜಾಕೆಟ್‌, ಪಾರಂಪರಿಕ ಸಂಗೀತ ಉಪಕರಣಗಳು, ಮಣಿಪುರದ ಜಾನಪದ ಕಲೆ ಬಿಂಬಿಸುವ ಕಲಾಕೃತಿಗಳು

₹ 500 - ಪ್ರದರ್ಶನಕ್ಕೆ ಇಡಲಾಗಿದ್ದ ಸ್ಮರಣಿಕೆಗೆ ನಿಗದಿ ಮಾಡಿದ್ದ ಕನಿಷ್ಠ ದರ

₹ 2.5ಲಕ್ಷ - ಸ್ಮರಣಿಕೆಗೆ ನಿಗದಿ ಮಾಡಿದ್ದ ಗರಿಷ್ಠ ದರ

₹ 25ಲಕ್ಷ - ಸ್ಮರಣಿಕೆಯೊಂದರ ಗರಿಷ್ಠ ಮಾರಾಟ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.