ADVERTISEMENT

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

ಪಿಟಿಐ
Published 29 ಸೆಪ್ಟೆಂಬರ್ 2020, 6:47 IST
Last Updated 29 ಸೆಪ್ಟೆಂಬರ್ 2020, 6:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಜಮ್ಮು–ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನದ ಪಡೆಗಳು ಮಂಗಳವಾರ ಕದನ ವಿರಾಮ ಉಲ್ಲಂಘನೆ ಮಾಡಿ, ಗುಂಡಿನ ದಾಳಿ ನಡೆಸಿವೆ. ಇದಕ್ಕೆ ಭಾರತದ ಪಡೆಗಳೂ ಪ್ರತ್ಯುತ್ತರ ನೀಡಿವೆ.

‘ಪಾಕಿಸ್ತಾನದ ಪಡೆಗಳು ನಸುಕಿನ ಜಾವ ಎಲ್‌ಒಸಿ ಬಳಿಯ ಮನ್‌ಕೋಟ್ ಸೆಕ್ಟರ್‌ನಲ್ಲಿ‌ ಅಪ್ರಚೋದಿತ ದಾಳಿಸಿದವು’ ಎಂದು ಸೇನೆಯ ವಕ್ತಾರ ತಿಳಿಸಿದರು.

ಈ ತಿಂಗಳು ಪಾಕಿಸ್ತಾನದ ಪಡೆಗಳು ಒಟ್ಟು 45 ಬಾರಿ ಕದನ ವಿರಾಮ ಉಲ್ಲಂಘಿಸಿವೆ. ಸೆ.2ರಂದು ರಜೌರಿ ಜಿಲ್ಲೆಯ ಕೇರಿ ಸೆಕ್ಟರ್‌ನಲ್ಲಿ ನಡೆದ ಅಪ್ರಚೋದಿತ ದಾಳಿಯಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದರು. 15 ದಿನಗಳ ಹಿಂದೆಯೂ ಕದನ ವಿರಾಮ ಉಲ್ಲಂಘಿಸಿ, ರಜೌರಿ ಜಿಲ್ಲೆಯ ಸುಂದರ್‌ಬನಿ ಸೆಕ್ಟರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದವು. ಈ ಘಟನೆಯಲ್ಲಿ ಒಬ್ಬ ಯೋಧ ಹುತಾತ್ಮರಾಗಿ, ಇಬ್ಬರು ನಾಗರಿಕರು ಮೃತಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.