ADVERTISEMENT

ಗಡಿಯಲ್ಲಿ ಪಾಕ್‌ ಡ್ರೋನ್‌ ಪತ್ತೆ

ಪಿಟಿಐ
Published 29 ಅಕ್ಟೋಬರ್ 2022, 13:36 IST
Last Updated 29 ಅಕ್ಟೋಬರ್ 2022, 13:36 IST

ಫೀರೋಜ್‌ಪುರ್ (ಪಿಟಿಐ): ಪಾಕಿಸ್ತಾನದ ಡ್ರೋನ್‌ ಶನಿವಾರ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಸ್ತಿನಲ್ಲಿದ್ದ ಗಡಿಭದ್ರತಾ ಪಡೆ ಸಿಬ್ಬಂದಿ 18 ಸುತ್ತು ಗುಂಡು ಹಾರಿಸಿದ ಬಳಿಕ ಡ್ರೋನ್‌ ಮರಳಿ ಪಾಕಿಸ್ತಾನದತ್ತ ತೆರಳಿತು ಎಂದು ತಿಳಿಸಿದ್ದಾರೆ.

ಗಡಿಗೆ ಹೊಂದಿಕೊಂಡ ಸ್ಥಳದಲ್ಲಿ ತಪಾಸಣಾ ಕಾರ್ಯ ನಡೆದಿದೆ. ಫಿರೋಜ್‌ಪುರ್ ವಲಯದಲ್ಲಿ ಅ.27ರಂದು ಎಕೆ–47 ರೈಫಲ್‌ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.