ADVERTISEMENT

ಭಾರತದ ರಾಜತಾಂತ್ರಿಕ ಅಧಿಕಾರಿಗೆ ಪಾಕ್ ಸಮನ್ಸ್‌

ಕದನ ವಿರಾಮ ಉಲ್ಲಂಘನೆ

ಪಿಟಿಐ
Published 23 ಡಿಸೆಂಬರ್ 2020, 10:30 IST
Last Updated 23 ಡಿಸೆಂಬರ್ 2020, 10:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತೀಯ ಸೇನೆಯು ಕದನ ವಿರಾಮ ನೀತಿಯನ್ನು ಉಲ್ಲಂಘಿಸಿದೆ ಎನ್ನುವ ಆರೋಪದಡಿ ಬುಧವಾರ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆದು ಪಾಕಿಸ್ತಾನವು ಎಚ್ಚರಿಕೆ ನೀಡಿದೆ.

ಹಾಟ್ಸ್‌ಪ್ರಿಂಗ್ ಮತ್ತು ಜಾಂಡ್ರೊಡ್ ವಲಯಗಳಲ್ಲಿ ಮಂಗಳವಾರ ಭಾರತೀಯ ಸೇನೆಯು ನಡೆಸಿರುವ ಗುಂಡಿನ ದಾಳಿಯಲ್ಲಿ 50 ವರ್ಷದ ಹಿರಿಯ ನಾಗರಿಕ ಸಾವನ್ನಪ್ಪಿದ್ದು, 4 ವರ್ಷದ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯು ಆರೋಪಿಸಿದೆ.

2003ರ ಕದನ ವಿರಾಮ ಉಲ್ಲಂಘನೆ ನೀತಿಯನ್ನು ಗೌರವಿಸುವ, ಗಡಿಯಲ್ಲಿ ಶಾಂತಿ ಕಾಪಾಡುವ ಕುರಿತು ಚರ್ಚಿಸಲು ಹಾಗೂ ಕದನ ವಿರಾಮ ಉಲ್ಲಂಘನೆ ಘಟನೆಗಳ ಕುರಿತ ತನಿಖೆಗಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿತ್ತು ಎಂದು ಪಾಕಿಸ್ತಾನವು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.