ADVERTISEMENT

ಪ್ಲೀಸ್ ನನ್ನ ಹೆಂಡ್ತಿ, ಮಕ್ಕಳನ್ನು ತೋರಿಸಿ.. ಸೀಮಾ ಹೈದರ್‌ನ ಹಳೆ ಗಂಡನ ಅಳಲು!

ಗುಲಾಮ್ ಹೈದರ್ ವಿಡಿಯೊ ಸಂದೇಶದ ಮೂಲಕ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಕೋರಿಕೊಂಡಿದ್ದಾರೆ.

ಪಿಟಿಐ
Published 18 ಜನವರಿ 2025, 15:59 IST
Last Updated 18 ಜನವರಿ 2025, 15:59 IST
<div class="paragraphs"><p>ಗುಲಾಂ ಹೈದರ್, ಸಚಿನ್, ಸೀಮಾ ಹೈದರ್</p></div>

ಗುಲಾಂ ಹೈದರ್, ಸಚಿನ್, ಸೀಮಾ ಹೈದರ್

   

ಕರಾಚಿ: ಗೆಳೆಯನಿಗಾಗಿ ಗಡಿ ನುಸುಳಿ ಭಾರತಕ್ಕೆ ಬಂದು ಸುದ್ದಿಯಾಗಿದ್ದ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‌ನ ಮೊದಲ ಗಂಡ ಪಾಕಿಸ್ತಾನದ ಗುಲಾಂ ಹೈದರ್, ‘ತಾನು ಭಾರತಕ್ಕೆ ಬರಬೇಕು, ಆ ಮೂಲಕ ಸೀಮಾಳನ್ನು, ನನ್ನ ಮಕ್ಕಳನ್ನು ಭೇಟಿಯಾಗಬೇಕು’ ಎಂಬ ಇರಾದೆ ವ್ಯಕ್ತಪಡಿಸಿದ್ದಾರೆ.

ಗುಲಾಮ್ ಹೈದರ್ ವಿಡಿಯೊ ಸಂದೇಶದ ಮೂಲಕ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಕೋರಿಕೊಂಡಿದ್ದಾರೆ.

ADVERTISEMENT

‘ಸೀಮಾ ನನ್ನನ್ನು ತೊರೆದು ಹೋದಾಗಿನಿಂದ ನನ್ನ ನಾಲ್ವರು ಮಕ್ಕಳು ಹಾಗೂ ಆಕೆಗಾಗಿ ನಾನು ನನ್ನ ವಕೀಲರ ಮೂಲಕ ನಿರಂತರ ಹೋರಾಟ ಮಾಡುತ್ತಿದ್ದೇನೆ. ಆದರೆ, ನನಗೆ ನ್ಯಾಯ ಸಿಕ್ಕಿಲ್ಲ, ನೀವಾದರೂ ನ್ಯಾಯ ದೊರಕಿಸಿ ಕೊಡಿ’ ಎಂದು ಜೈಶಂಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಗುಲಾಂ ಹೈದರ್ ಸೀಮಾಳನ್ನು ಮದುವೆ ಆಗುವ ಮೊದಲು ಯುಎಇನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಪಾಕ್‌ನಲ್ಲಿ ಸೀಮಾಳನ್ನು ಮದುವೆಯಾಗಿ ನಾಲ್ಕು ಮಕ್ಕಳನ್ನು ಪಡೆದಿದ್ದರು.

ಸೀಮಾ ಹೈದರ್ ಅವರು ಪಬ್‌ಜಿ (PubG) ಆನ್‌ಲೈನ್ ಗೇಮ್ ಮೂಲಕ ಭಾರತದ ಸಚಿನ್ ಮೀನಾ ಅವರಿಗೆ ಪರಿಚಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಬಳಿಕ 2023ರ ಮೇ ತಿಂಗಳಲ್ಲಿ ತಮ್ಮ ನಾಲ್ವರು ಮಕ್ಕಳೊಂದಿಗೆ ಉತ್ತರಪ್ರದೇಶದ ನೊಯ್ಡಾಕ್ಕೆ ಬಂದಿದ್ದ ಸೀಮಾ ಅವರು ಸಚಿನ್ ಅವರನ್ನು ವಿವಾಹವಾಗಿದ್ದರು.

ವೀಸಾ ಇಲ್ಲದೆ ನೇಪಾಳದ ಮೂಲಕ  ಭಾರತವನ್ನು ಪ್ರವೇಶಿಸಿದ್ದ ಸೀಮಾ ಅವರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು.

ಸೀಮಾ ಅವರನ್ನು ಜುಲೈ 4ರಂದು ಪೊಲೀಸರು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯ ಅವರಿಗೆ 2023ರ ಜುಲೈ 7ರಂದು ಜಾಮೀನು ನೀಡಿತ್ತು.

ಪ್ರೀತಿಸಿದ ಯುವಕನ ಜೊತೆಗೆ ನೆಲೆಸುವ ಉದ್ದೇಶದಿಂದ ಸೀಮಾ ಹೈದರ್‌ ಪಾಕಿಸ್ತಾನ ತೊರೆದು ಭಾರತ ಪ್ರವೇಶಿಸಿದ್ದು, ಈ ಘಟನೆಯಲ್ಲಿ ‘ಪ್ರೀತಿ’ಯನ್ನು ಮೀರಿದ್ದೇನೂ ಇಲ್ಲ ಎಂದು ಪಾಕ್‌ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ವರದಿ ನೀಡಿತ್ತು.

ಸದ್ಯ ಉತ್ತರಪ್ರದೇಶದಲ್ಲಿ ಸಚಿನ್ ಮೀನಾ ಅವರ ಜೊತೆ ನೆಲೆ ನಿಂತಿರುವ ಸೀಮಾ, ಅವರಿಂದ ಒಂದು ಮಗುವನ್ನೂ ಪಡೆದಿದ್ದಾರೆ. ತಮ್ಮ ಎಲ್ಲ ಮಕ್ಕಳಿಗೆ ಹಿಂದೂ ಹೆಸರುಗಳನ್ನು ಇಟ್ಟಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.