ADVERTISEMENT

ಒಳನುಗ್ಗಲು ಪ್ರಯತ್ನಿಸಿದ ಪಾಕ್‌ ಪ್ರಜೆಗೆ ಗುಂಡು

ಪಿಟಿಐ
Published 11 ಆಗಸ್ಟ್ 2025, 16:00 IST
Last Updated 11 ಆಗಸ್ಟ್ 2025, 16:00 IST
   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ತಾನದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್‌) ಸೋಮವಾರ ಬಂಧಿಸಿವೆ.

ಎಚ್ಚರಿಕೆಯ ಹೊರತಾಗಿಯೂ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪಾಕಿಸ್ತಾನಕ್ಕೆ ಭಾರತವು ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

ಇದಕ್ಕೂ ಮುನ್ನ ಸಂಜೆ 4 ಗಂಟೆ ಸುಮಾರಿಗೆ ಹೀರಾನಗರ ವಲಯದ ಚಾಂದ್ವಾನ್‌ ಹಾಗೂ ಕೊಥೆ ಗಡಿಯಲ್ಲಿ ಒಳನುಸುಳಲು ಪ್ರಯತ್ನಿಸಿದವರ ಮೇಲೂ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.