ADVERTISEMENT

ನವಾಜ್‌ ಷರೀಫ್‌ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು

ಪಿಟಿಐ
Published 27 ಜೂನ್ 2020, 9:08 IST
Last Updated 27 ಜೂನ್ 2020, 9:08 IST
ನವಾಜ್‌ ಷರೀಫ್
ನವಾಜ್‌ ಷರೀಫ್   

ಲಾಹೋರ್‌: ಅಕ್ರಮ ಭೂ ಹಂಚಿಕೆ ಆರೋಪದಡಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ಸೇರಿದಂತೆ ಮೂವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ.

ಈ ಸಂಬಂಧಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ನವಾಜ್‌ ಷರೀಫ್‌ನನ್ನು ಬಂಧಿಸಲುವಾರಂಟ್‌ ಸಹ ಹೊರಡಿಸಲಾಗಿದೆ.

ಇದುವರೆಗಿನ ಯಾವುದೇ ಸಮನ್ಸ್‌ಗಳಿಗೆ ಉತ್ತರ ನೀಡದಿರುವುದರಿಂದ ಷರೀಫ್‌ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೊ (ಎನ್‌ಎಬಿ) ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವನ್ನು ಕೋರಿದೆ.

ADVERTISEMENT

ಷರೀಫ್‌ ಅವರ ಜತೆ ಜಿಯೋ ಮಿಡಿಯಾ ಗ್ರೂಪ್‌ ಮಾಲೀಕ ಮೀರ್‌ ಶಕಿಲೂರ್‌ ರಹಮಾನ್‌, ಲಾಹೋರ್‌ ಅಭಿವೃದ್ಧಿ ಪ್ರಾಧಿಕಾರದ (ಎಲ್‌ಡಿಎ) ಮಾಜಿ ನಿರ್ದೇಶಕ ಹುಮಯೂನ್‌ ಫೈಜ್‌ ರಸೂಲ್ ಮತ್ತು ಮಾಜಿ ನಿರ್ದೇಶಕ ಮಿಯಾನ್‌ ಬಶೀರ್‌ ವಿರುದ್ಧ ಭ್ರಷ್ಟಚಾರ ಪ್ರಕರಣ ದಾಖಲಿಸಲಾಗಿದೆ.

1986ರಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನವಾಜ್‌ ಷರೀಫ್‌ ಅವರು ನಿಯಮಗಳನ್ನು ಉಲ್ಲಂಘಿಸಿ ಮಿರ್ ಶಕೀಲೂರ್ ರೆಹಮಾನ್‌ ಅವರಿಗೆ ಜಮೀನು ಮಂಜೂರು ಮಾಡಿದ್ದರು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.