ADVERTISEMENT

Operation Sindoor: ಪಾಕ್‌ನ 100ಕ್ಕೂ ಹೆಚ್ಚು ಯೋಧರ ಸಾವು- ಡಿಜಿಎಂಒ

ಪಿಟಿಐ
Published 14 ಅಕ್ಟೋಬರ್ 2025, 16:09 IST
Last Updated 14 ಅಕ್ಟೋಬರ್ 2025, 16:09 IST
<div class="paragraphs"><p> Operation Sindoor: ಭಾರತದ ದಾಳಿ </p></div>

Operation Sindoor: ಭಾರತದ ದಾಳಿ

   

ನವದೆಹಲಿ: ‘ಸಿಂಧೂರ’ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನವು 100ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದೆ ಎಂದು ಭಾರತ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಯಿ ಹೇಳಿದ್ದಾರೆ.

ಪಾಕಿಸ್ತಾನ ಸೇನೆಯು ಮರಣೋತ್ತರವಾಗಿ ನೀಡಿದ ಪ್ರಶಸ್ತಿಗಳ ಪಟ್ಟಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಮೇ ತಿಂಗಳಲ್ಲಿ ನಡೆದ ಸಂಘರ್ಷದಲ್ಲಿ ಪಾಕಿಸ್ತಾನವು 12 ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಘಯಿ ತಿಳಿಸಿದ್ದಾರೆ.

ADVERTISEMENT

‘ಪಾಕಿಸ್ತಾನದವರು ತಮ್ಮ ಯೋಧರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಗಳ ಪಟ್ಟಿಯನ್ನು ಆಗಸ್ಟ್‌ 14ರಂದು ಬಿಡುಗಡೆ ಮಾಡಿದ್ದಾರೆ. ಮರಣೋತ್ತರ ಪ್ರಶಸ್ತಿಗಳ ಸಂಖ್ಯೆಯು, ಸಿಂಧೂರ ಕಾರ್ಯಾಚರಣೆ ವೇಳೆ ಎಲ್‌ಒಸಿ ಬಳಿ ಅವರು 100ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿರುವುದನ್ನು ಸೂಚಿಸುತ್ತದೆ’ ಎಂದಿದ್ದಾರೆ.