ADVERTISEMENT

ರುದ್ರಪ್ರಯಾಗದಲ್ಲಿ ಭೂಕುಸಿತ: ಇಬ್ಬರ ಸಾವು

ಪಿಟಿಐ
Published 18 ಜೂನ್ 2025, 13:19 IST
Last Updated 18 ಜೂನ್ 2025, 13:19 IST
ರುದ್ರಪ್ರಯಾಗದ ಜಂಗಲ್‌ಚಟ್ಟಿ ಸಮೀಪ ಬುಧವಾರ ಸಂಭವಿಸಿದ ಭೂಕುಸಿತದ ದೃಶ್ಯ
ರುದ್ರಪ್ರಯಾಗದ ಜಂಗಲ್‌ಚಟ್ಟಿ ಸಮೀಪ ಬುಧವಾರ ಸಂಭವಿಸಿದ ಭೂಕುಸಿತದ ದೃಶ್ಯ   

ರುದ್ರಪ್ರಯಾಗ(ಉತ್ತರಾಖಂಡ್‌): ಕೇದಾರನಾಥದ ಜಂಗಲ್‌ಚಟ್ಟಿ ಘಾಟ್‌ನ ಚಾರಣ ಮಾರ್ಗದಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಲ್ಲಿ, ಜನರನ್ನು ಡೋಲಿಯಲ್ಲಿ ಹೊತ್ತು ಸಾಗುವ ಇಬ್ಬರು ಮೃತಪಟ್ಟಿದ್ದು, ಯಾತ್ರಿಯೊಬ್ಬರು ಸೇರಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯ ನಿತಿನ್‌ ಕುಮಾರ್‌ ಮತ್ತು ಚಂದ್ರಶೇಖರ್‌ ಮೃತರು. 

ಗುಜರಾತ್‌ನ ಭಾವನಗರದ ಯಾತ್ರಿಕ ಆಕಾಶ್‌ ಚಿಟ್ರಿಯಾ, ಜಮ್ಮು ಮತ್ತು ಕಾಶ್ಮೀರದ ಡೋಲಿ ಹೊರುವ ಸಂದೀಪ್‌ ಕುಮಾರ್, ನಿತಿನ್ ಮನ್ಹಾಸ್ ಗಾಯಗೊಂಡವರು.

ADVERTISEMENT

ಬುಧವಾರ ಬೆಳಿಗ್ಗೆ 11.20ರ ಸುಮಾರಿಗೆ ಬೆಟ್ಟ ಪ್ರದೇಶದಿಂದ ಉರುಳಿಬಂದ ಬಂಡೆಗಳು ಅಪ್ಪಳಿಸಿದ್ದರಿಂದ ಸಾವು–ನೋವು ಸಂಭವಿಸಿದೆ. ಪೊಲೀಸ್ ನಿಗಾದಲ್ಲಿ ಯಾತ್ರೆ ಮುಂದುವರೆದಿದೆ ಎಂದು ರುದ್ರಪ್ರಯಾಗ ಎಸ್‌ಪಿ ಅಕ್ಷಯ್‌ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.