ನವದೆಹಲಿ: ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ‘ಪಲ್ಲಾಸ್ ಕ್ಯಾಟ್’ ಎಂಬ ವಿರಳ ಜಾತಿಯ ಕಾಡುಬೆಕ್ಕಿನ ಚಿತ್ರಗಳು ಇದೇ ಮೊದಲ ಬಾರಿ ಸೆರೆಯಾಗಿವೆ.
ಇದರೊಂದಿಗೆ ಹಿಮಾಲಯದಲ್ಲಿ 4,200 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ 6 ವಿವಿಧ ಜಾತಿಯ ಕಾಡಿನ ಬೆಕ್ಕುಗಳ ಇರುವಿಕೆಯು ಪತ್ತೆಯಾದಂತಾಗಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ಭಾರತ ಘಟಕವು ಸೋಮವಾರ ತಿಳಿಸಿದೆ.
ಈವರೆಗೆ 5 ವಿಧದ ಕಾಡು ಬೆಕ್ಕಿನ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಅವುಗಳೆಂದರೆ: ಸ್ನೋ ಲೆಪರ್ಡ್, ಕ್ಲೌಡೆಡ್ ಲೆಪರ್ಡ್, ಲೆಪರ್ಡ್ ಕ್ಯಾಟ್, ಕಾಮನ್ ಲೆಪರ್ಡ್ ಮತ್ತು ಮಾರ್ಬಲ್ಡ್ ಕ್ಯಾಟ್‌ಗಳು.
ಭಾರತದ ವಿಶ್ವ ವನ್ಯಜೀವಿ ಸಂಸ್ಥೆಯು ಹಿಮಾಲಯದಲ್ಲಿನ ವನ್ಯಜೀವಿ ಪರಿಸರದ ಕುರಿತು ಸಮೀಕ್ಷೆ ನಡೆಸುತ್ತಿದೆ. ತವಾಂಗ್ ಹಾಗೂ ಪಶ್ಚಿಮ ಕಮೆಂಗ್ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ.
ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ವನ್ಯಜೀವಿಗಳ ಇರುವಿಕೆಯು ಇದು ದೇಶದ ಮಹತ್ತರ ದಾಖಲೆಯಾಗಿದ್ದು, ನೂತನ ಅಧ್ಯಯನಕ್ಕೆ ದಾರಿಯಾಗಿದೆ.
ರಾಜ್ಯ ಅರಣ್ಯ ಇಲಾಖೆಯ ಬೆಂಬಲ ಹಾಗೂ ಸ್ಥಳೀಯರ ಬೆಂಬಲದೊಂದಿಗೆ ಸಂಸ್ಥೆಯು ‘ರಿವೈವಿಂಗ್ ಟ್ರಾನ್ಸ್–ಹಿಮಾಲಯನ್ ರೇಂಜ್‌ಲ್ಯಾಂಡ್ಸ್– ಎ ಕಮ್ಯುನಿಟಿ– ಲೆಡ್ ವಿಶನ್ ಫಾರ್ ಪೀಪಲ್ ಆ್ಯಂಡ್ ನೇಚರ್’ ಯೋಜನೆಯಡಿ ಸಮೀಕ್ಷೆ ನಡೆಸುತ್ತಿವೆ.
2024ರ ಸೆಪ್ಟೆಂಬರ್‌ನಲ್ಲಿ ಹಿಮಾಲಯದ 2,000 ಚದರ ಅಡಿ ಕಿ.ಮೀ ಎತ್ತರದಲ್ಲಿ 83 ಕಡೆ 136 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.