ADVERTISEMENT

ರಾಮ ಮಂದಿರ ನಿರ್ಮಾಣ: ತಜ್ಞರ ಜತೆ ಸಮಾಲೋಚನೆ

ಪಿಟಿಐ
Published 30 ಅಕ್ಟೋಬರ್ 2020, 18:27 IST
Last Updated 30 ಅಕ್ಟೋಬರ್ 2020, 18:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಯೋಧ್ಯಾ: ರಾಮ ಮಂದಿರ ನಿರ್ಮಾಣ ಕುರಿತಂತೆ ರಾಮ ಮಂದಿರ ನಿರ್ಮಾಣ ಸಮಿತಿ ಚೇರಮನ್‌ ನೃಪೇಂದ್ರ ಮಿಶ್ರಾ ಅವರು ಫೈಜಾಬಾದ್‌ನ ಸರ್ಕೀಟ್‌ ಹೌಸ್‌ನಲ್ಲಿ ಎಂಜಿನಿಯರುಗಳು ಹಾಗೂ ತಜ್ಞರೊಂದಿಗೆ ಶುಕ್ರವಾರ ಸಭೆ ನಡೆಸಿದರು.

ಟಾಟಾ ಕನ್ಸಲ್ಟಿಂಗ್‌ ಆ್ಯಂಡ್‌ ಎಂಜಿನಿಯರಿಂಗ್‌ನ ಎಂಜಿನಿಯರ್‌ಗಳು, ಲಾರ್ಸೆನ್‌ ಆ್ಯಂಡ್ ಟೂಬ್ರೊ ಕಂಪನಿಯ ತಜ್ಞರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟಾಟಾ ಕಂಪನಿಯ ಎಂಜಿನಿಯರ್‌ಗಳು ಪಾಲ್ಗೊಂಡಿದ್ದ ಮೊದಲ ಸಭೆ ಇದಾಗಿದೆ. ಹೀಗಾಗಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಟಾಟಾ ಸಂಸ್ಥೆಯ ಎಂಜಿನಿಯರ್‌ಗಳನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇರುವುದನ್ನು ಈ ಸಭೆಯಿಂದ ಗೊತ್ತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ವರೆಗಿನ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚಸಿಲಾಯಿತು. ನೃಪೇಂದ್ರ ಮಿಶ್ರಾ ಅವರು ಹಲವಾರು ಅಂಶಗಳನ್ನು ಸಭೆಯಲ್ಲಿ ಚರ್ಚಿಸಿದರು. ಜೊತೆಗೆ, ತಜ್ಞರ ಅಭಿಪ್ರಾಯಗಳನ್ನೂ ಪಡೆಯಲಾಯಿತು’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಡ್‌ನ ಸದಸ್ಯ ಡಾ.ಅನಿಲ್‌ ಮಿಶ್ರಾ ತಿಳಿಸಿದರು.

‘ಮಂದಿರದ ಅಡಿಪಾಯಕ್ಕಾಗಿ ಅಳವಡಿಸಿರುವ ಮೂರು ಪಿಲ್ಲರ್‌ಗಳ ಸಾಮರ್ಥ್ಯದ ಬಗ್ಗೆ ಐಐಟಿ–ಚೆನ್ನೈನ ವರದಿಗಾಗಿ ಕಾಯುತ್ತಿದ್ದೇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.