ADVERTISEMENT

ಸಂಸತ್‌ ಕಲಾಪ ಆರು ದಿನಗಳಷ್ಟೇ ಬಾಕಿ; ಪ್ರಮುಖ ಮಸೂದೆಗಳ ಅಂಗೀಕಾರ ಸಾಧ್ಯತೆ?

ಸಂಸತ್‌ ಕಲಾಪ ಆರು ದಿನಗಳಷ್ಟೇ ಬಾಕಿ; ಎಸ್‌ಐಆರ್‌ಗಿಲ್ಲ ಚರ್ಚೆ

ಪಿಟಿಐ
Published 9 ಆಗಸ್ಟ್ 2025, 23:57 IST
Last Updated 9 ಆಗಸ್ಟ್ 2025, 23:57 IST
ಸಂಸತ್‌ ಭವನ–ಎಎಫ್‌ಪಿ ಚಿತ್ರ
ಸಂಸತ್‌ ಭವನ–ಎಎಫ್‌ಪಿ ಚಿತ್ರ   

ನವದೆಹಲಿ: ಸಂಸತ್‌ನ ಮಳೆಗಾಲದ ಅಧಿವೇಶನ ಇನ್ನೂ ಆರು ದಿನ ಬಾಕಿ ಉಳಿದಿರುವಂತೆಯೇ, ಪ್ರಮುಖ ಮಸೂದೆಗಳನ್ನು ಮಂಡಿಸಲು ಆಡಳಿತರೂಢಾ ಪಕ್ಷ ಸಿದ್ಧತೆ ನಡೆಸಿದೆ. ಬಿಹಾರದಲ್ಲಿ ನಡೆಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಅವಕಾಶ ನೀಡದಿರಲು ನಿರ್ಧರಿಸಿದೆ.

ರಾಷ್ಟ್ರೀಯ ಕ್ರೀಡಾ ಮಸೂದೆ–2025, ಭಾರತೀಯ ಬಂದರು ಮಸೂದೆ–2025 ಹಾಗೂ ನಕ್ಸಲ್‌ ಚಟುವಟಿಕೆಗಳ ನಿಗ್ರಹ ಹಾಗೂ ಬಾಹ್ಯಾಕಾಶ ಕ್ಷೇತ್ರದ ಕುರಿತಂತೆ ಚರ್ಚೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದರ ಹೊರತಾಗಿಯೂ ವಿರೋಧ ಪಕ್ಷಗಳು ಎಸ್‌ಐಆರ್‌ ವಿಚಾರ ಮುಂದಿಟ್ಟುಕೊಂಡೇ ಸೋಮವಾರ ಕೂಡ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

‘ಮುಂದಿನ ವಾರ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಆಲೋಚನೆ ಸರ್ಕಾರಕ್ಕಿಲ್ಲ. ಮುಂದಿನ ದಿನಗಳಲ್ಲಿ ಹಲವು ಮಸೂದೆಗಳ ಕುರಿತು ಚರ್ಚೆ ನಡೆದು, ಉಭಯ ಸದನಗಳಲ್ಲಿ ಅಂಗೀಕರಿಸುವ ಗುರಿ ಹೊಂದಿದೆ’ ಎಂದು ಸಂಸದೀಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.