ADVERTISEMENT

ವಿಪಕ್ಷಗಳ ಪ್ರತಿಭಟನೆ; ಗದ್ದಲದಲ್ಲೇ ಮಸೂದೆ ಮಂಡನೆ ಅನಿವಾರ್ಯ: ರಿಜುಜು

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜುಜು ಹೇಳಿಕೆ

ಪಿಟಿಐ
Published 4 ಆಗಸ್ಟ್ 2025, 15:18 IST
Last Updated 4 ಆಗಸ್ಟ್ 2025, 15:18 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ನಿರಂತರವಾಗಿ ನಡೆಸುತ್ತಿದ್ದು, ಗದ್ದಲದಲ್ಲೇ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಸೋಮವಾರ ಹೇಳಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತಂತೆ ವಿರೋಧ ಪಕ್ಷಗಳು ಉಭಯ ಸದನದಲ್ಲೂ ತಮ್ಮ ಪಟ್ಟು ಸಡಿಲಿಸದಿರುವುದರಿಂದ ಮುಂಗಾರು ಅಧಿವೇಶನಕ್ಕೆ ಅಡ್ಡಿಯಾಗಿದೆ.

‘ಕೇಂದ್ರ ಸರ್ಕಾರವು ಮಸೂದೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಿದ್ದವಿದೆ. ಆದರೆ ವಿರೋಧ ಪಕ್ಷಗಳು ಕಲಾಪದಲ್ಲಿ ಪ್ರತಿಭಟಿಸುತ್ತಿರುವುದರಿಂದ, ಪ್ರಸ್ತಾವಿತ ಮಸೂದೆಗಳು ಆಡಳಿತಕ್ಕೆ ಮುಖ್ಯವಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಯಡಿ ಅವುಗಳ ಅಂಗೀಕಾರಕ್ಕೆ ಮಂಗಳವಾರದಿಂದ ಮುಂದಾಗಲಿದೆ’ ಎಂದು ರಿಜಿಜು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.