ADVERTISEMENT

ಹೊಸ ಸಮವಸ್ತ್ರ ಧರಿಸದಿರಲು ಸಂಸತ್ ಭದ್ರತಾ ಸಿಬ್ಬಂದಿ ನಿರ್ಧಾರ: ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2023, 2:55 IST
Last Updated 21 ಸೆಪ್ಟೆಂಬರ್ 2023, 2:55 IST
<div class="paragraphs"><p>ಸಂಸತ್ತಿನ ಭದ್ರತಾ ಸಿಬ್ಬಂದಿ ಹೊಸ ಸಮವಸ್ತ್ರದಲ್ಲಿ </p></div>

ಸಂಸತ್ತಿನ ಭದ್ರತಾ ಸಿಬ್ಬಂದಿ ಹೊಸ ಸಮವಸ್ತ್ರದಲ್ಲಿ

   

ಪಿಟಿಐ ಚಿತ್ರ

ನವದೆಹಲಿ: ಹೊಸ ಸಂಸತ್‌ ಭವನದ ಸಿಬ್ಬಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಸಮವಸ್ತ್ರಗಳನ್ನು ಧರಿಸದಿರಲು ಸಂಸತ್ತಿನ ಭದ್ರತಾ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟೆಂಬರ್‌ 18ರಿಂದ 22ರ ವರೆಗೆ ನಡೆಯುತ್ತಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಸಂಸತ್‌ ಸಿಬ್ಬಂದಿಯ ಸಮವಸ್ತ್ರವನ್ನು ಬದಲಾವಣೆ ಮಾಡಿದೆ. ಸಮವಸ್ತ್ರಗಳನ್ನು National Institute of Fashion Technology (NIFT) ವಿನ್ಯಾಸಗೊಳಿಸಿದೆ.

ಹೊಸ ಸಮವಸ್ತ್ರವು ಸಿಂಥೆಟಿಕ್‌ನದ್ದಾಗಿದ್ದು, ಶಾಖವನ್ನುಂಟುಮಾಡುತ್ತದೆ ಎಂದು ಭದ್ರತೆಗೆ ನಿಯೋಜನೆಗೊಂಡಿದ್ದ ಹಲವು ಸಿಬ್ಬಂದಿ ದೂರಿದ್ದಾರೆ. ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ನಡೆದ ಭದ್ರತಾ ವಿಭಾಗದ ತುರ್ತು ಸಭೆಯಲ್ಲಿ, ಹಳೇ ಸಮವಸ್ತ್ರವನ್ನೇ ಧರಿಸಲು ತೀರ್ಮಾನಿಸಲಾಗಿದೆ.

ಭದ್ರತಾ ವಿಭಾಗದ ಸಿಬ್ಬಂದಿಗೆ ನೀಲಿ ಸಫಾರಿ ಸ್ಯೂಟ್‌ಗಳಿಗೆ ಬದಲಾಗಿ, ಮಿಲಿಟರಿ ಮಾದರಿಯ ಸಮವಸ್ತ್ರಗಳನ್ನು ನೀಡಲಾಗಿತ್ತು. ಹಲವರು ಸಮವಸ್ತ್ರದ ಬಗ್ಗೆ ದೂರು ನೀಡಿದ್ದರಿಂದ ಮುಂದಿನ ಆದೇಶದವರೆಗೆ ಹಳೇ ಸಮವಸ್ತ್ರವನ್ನೇ ಧರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.