ADVERTISEMENT

ಒಂದು ರಾಷ್ಟ್ರ, ಒಂದು ಚುನಾವಣೆ | ಸಲಹೆ ಆಹ್ವಾನಿಸಲು ವೆಬ್‌ಸೈಟ್: ಪಿ.ಪಿ ಚೌಧರಿ

ಪಿಟಿಐ
Published 11 ಮಾರ್ಚ್ 2025, 14:26 IST
Last Updated 11 ಮಾರ್ಚ್ 2025, 14:26 IST
ಪಿ.ಪಿ ಚೌಧರಿ
ಪಿ.ಪಿ ಚೌಧರಿ   

ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಬಗ್ಗೆ ದೇಶದಾದ್ಯಂತ ಜನರ ಸಲಹೆಗಳನ್ನು ಆಹ್ವಾನಿಸಲು ಮಸೂದೆಗಳ ಪರಿಶೀಲನೆಗೆ ರಚಿಸಿರುವ ಜಂಟಿ ಸಂಸದೀಯ ಸಮಿತಿಯು ಶೀಘ್ರದಲ್ಲೇ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಲಿದೆ.

'ಸಮಿತಿಯು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಏಕಕಾಲದಲ್ಲಿ ಚುನಾವಣೆ ವಿಷಯದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡ ಬಯಸಿದೆ' ಎಂದು ಜಂಟಿ ಸಮಿತಿಯ ಅಧ್ಯಕ್ಷರೂ ಆಗಿರುವ ಬಿಜೆಪಿ ನಾಯಕ ಪಿ.ಪಿ ಚೌಧರಿ ಹೇಳಿದ್ದಾರೆ.

ಸಮಿತಿಯು ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ಮತ್ತು ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರ ಅಭಿಪ್ರಾಯಗಳನ್ನು ಸಹ ಕೇಳಿದೆ. ಏಕಕಾಲದಲ್ಲಿ ಚುನಾವಣೆ ಕುರಿತು ದೇಶಾದ್ಯಂತ ಜ್ಞಾಪನಾ ಪತ್ರಗಳನ್ನು ಆಹ್ವಾನಿಸುವ ಜಾಹೀರಾತನ್ನು ಸಮಿತಿಯು ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.