ADVERTISEMENT

India Pak Tensions | ವಿಮಾನ ನಿಲ್ದಾಣಕ್ಕೆ 3 ಗಂಟೆ ಮುನ್ನ ತಲುಪಿ: ಬಿಸಿಎಎಸ್‌

ಪಿಟಿಐ
Published 9 ಮೇ 2025, 13:35 IST
Last Updated 9 ಮೇ 2025, 13:35 IST
.
.   

ಮುಂಬೈ: ಪ್ರಯಾಣಿಕರು ತಾವು ಪ್ರಯಾಣಿಸುವ ವಿಮಾನಗಳು ಹೊರಡುವ ನಿಗದಿತ ಸಮಯಕ್ಕಿಂತ ಮೂರು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಗಳನ್ನು ತಲುಪುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌) ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ಪ್ರಯಾಣಿಕರು ಆನ್‌ಲೈನ್‌ನಲ್ಲಿ ಚೆಕ್‌–ಇನ್‌ ಮಾಡಿಕೊಳ್ಳುವ ಮೂಲಕ ಸಮಯ ಉಳಿಸಿಕೊಳ್ಳಬಹುದು ಎಂದು ವಿಮಾನಯಾನ ಸಂಸ್ಥೆಗಳು ಸಲಹೆ ನೀಡಿವೆ.

ADVERTISEMENT

‘ವಿಮಾನ ಹೊರಡುವ 75 ನಿಮಿಷ ಮೊದಲು ಚೆಕ್‌–ಇನ್‌ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಚೆಕ್‌–ಇನ್‌ ಮತ್ತು ಬೋರ್ಡಿಂಗ್‌ ಪ್ರಕ್ರಿಯೆಗಳನ್ನು ಸುಗಮವಾಗಿಸಲು ಪ್ರಯಾಣಿಕರು ವಿಮಾನ ನಿಲ್ದಾಣಗಳಿಗೆ ಮೂರು ಗಂಟೆ ಮೊದಲೇ ತಲುಪಿ’ ಎಂದು ಏರ್‌ ಇಂಡಿಯಾ ಸಾಮಾಜಿಕ ಜಾಲತಾಣದ ಮೂಲಕ ಪ್ರಯಾಣಿಕರಿಗೆ ಸಲಹೆ ನೀಡಿದೆ. ಇದೇ ರೀತಿಯ ಸಲಹೆಗಳನ್ನು ಆಕಾಶ ಏರ್‌, ಇಂಡಿಗೊ, ಸ್ಪೈಸ್‌ ಜೆಟ್‌ ಸಹ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.